Monday, October 26, 2026

Dasara Wishes

Sting operation DasraWishes_JK DasraWishes JK
Happy Dasara
Home Front Page ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಟ್ರಾಫಿಕ್ ಫೈನ್ ಗೆ ಶೇ 50ರಷ್ಟು ಡಿಸ್ಕೌಂಟ್

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಟ್ರಾಫಿಕ್ ಫೈನ್ ಗೆ ಶೇ 50ರಷ್ಟು ಡಿಸ್ಕೌಂಟ್

ಮೈಸೂರು,ಜೂನ್.5,2026 (www.justkannada.in):  ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೆ ಸಿಹಿಸುದ್ದಿ ನೀಡಿದ್ದು,  ಶೇ 50 ರಿಯಾಯಿತಿಯಲ್ಲಿ ದಂಡವನ್ನು ಪಾವತಿಸಲು ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ  ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರುಗಳಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡುವಂತೆ ಮೈಸೂರು ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಆದೇಶದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಬಗ್ಗೆ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ದಂಡದ ಮೊತ್ತವನ್ನು ದಿನಾಂಕ 21.06.2026 ರಿಂದ 10.07.2026 (ಒಟ್ಟು 20 ದಿನಗಳು) ರವರೆಗೆ ಪಾವತಿಸಲು ಮೇಲ್ಕಂಡ ಉಲ್ಲೇಖದಂತೆ ಸರ್ಕಾರವು ಆದೇಶವನ್ನು ಹೊರಡಿಸಿದೆ.ವಾಹನ ಸವಾರರಿಗೆ ಗುಡ್ ನ್ಯೂಸ್ traffice

ಆದ್ದರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸಾರ್ವಜನಿಕರು ಹಾಗೂ ವಾಹನ ಚಾಲಕರುಗಳಿಗೆ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿಲಾಗಿದೆ.ಮತ್ತೆ ಟ್ರಾಫಿಕ್ ಫೈನ್ ಗೆ ಶೇ 50ರಷ್ಟು ಡಿಸ್ಕೌಂಟ್ traffic fine mysore

ಈ ದಂಡದ ಮೊತ್ತವನ್ನು ದಿನಾಂಕ 21.06.2026 ರಿಂದ 10.07.2026 ರವರೆಗೆ ಹಾಗೂ ಮೈಸೂರು ಜಿಲ್ಲೆಯ ಯಾವುದೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದಂಡ ಪಾವತಿ ಮಾಡಿಕೊಳ್ಳುವಂತೆ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಕೋರಿಕೊಳ್ಳುತ್ತೇವೆ ಎಂದು ಮೈಸೂರು ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

Key words: Mysore, Good news, motorists, 50% discount, traffic fines