ಕಥಾನಕ ಕೈಬಿಡಲ್ಲ ಎಂದ ಸಚಿವ ಬಿ.ಸಿ ನಾಗೇಶ್ ಗೆ ಸಾಹಿತಿ ದೇವನೂರ ಮಹದೇವ ತಿರುಗೇಟು.

ಮೈಸೂರು,ಮೇ,25,2022(www.justkannada.in): ಈಗಾಗಲೇ ಪಠ್ಯ ಮುದ್ರಣವಾಗಿದ್ದು ಮಕ್ಕಳ ಕೈ ಸೇರಲಿದೆ. ಈ ಸಂದರ್ಭದಲ್ಲಿ ದೇವನೂರ ಮಹದೇವ ಅವರ ಕಥಾನಕ ಕೈ ಬಿಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಗೆ ಹಿರಿಯ ಸಾಹಿತಿ ದೇವನೂರ ಮಹದೇವ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಹಿರಿಯ ಸಾಹಿತಿ ದೇವನೂರು ಮಹದೇವ, ಪಠ್ಯ ಪುಸ್ತಕ ಪ್ರಿಂಟ್ ಆಗಿದೆ ಅಂದ್ರೆ ವಾಪಾಸ್ ಕಿತ್ತುಕೊಳ್ಳೋಕೆ ಆಗುತ್ತಾ..? ಪಠ್ಯ ಮಕ್ಕಳ ಕೈ ಸೇರಿದ್ದರೆ ಸರ್ಕಾರ, ಅಧಿಕಾರ ಅವರ ಕೈನಲ್ಲೇ ಇದೆ. ಪಾಠ ಮಾಡಬೇಡಿ ಅಂತ ಸರ್ಕಾರ ಹೇಳಲಿ. ನಾನು ಪ್ರಚೋದನೆಗೆ ಒಳಗಾಗಿದ್ದೀನಿ ಅಂದ್ರೆ ಇವರು ಯಾರ ಪ್ರಚೋದನೆಗೆ ಒಳಗಾಗಿದ್ದಾರೆ..?. ಅವರು ನಾಗಪುರದ ಆರ್‌ ಎಸ್‌ ಎಸ್‌ ಪ್ರಭಾವಕ್ಕೆ ಒಳಗಾಗಿರೋದು ಎಂದು ಟಾಂಗ್ ನೀಡಿದರು.

ಮಕ್ಕಳಿಗೆ ಶೈಕ್ಷಣಿಕ ಕೊರತೆ ಉಂಟಾಗಬಾರದು. ಮೌಢ್ಯಕ್ಕೆ ಒಳಗಾಗಬಾರದು. ಅದಕ್ಕೆ ಪರ್ಯಾಯ ವಾಟ್ಸಪ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನ, ಕೈ ಬಿಟ್ಟ ಪಠ್ಯಗಳು ಬಗ್ಗೆ ಕಮ್ಮಟ ಕಾರ್ಯಾಗಳ ಮೂಲಕ ಮನವರಿಕೆ ಮಾಡ್ತೀವಿ. ಈ ಮೂಲಕ ಪ್ರಜಾಸತ್ತಾತ್ಮಕವಾಗಿ ಗಟ್ಟಿಗೊಳಿಸುತ್ತೇವೆ ಎಂದು ದೇವನೂರ ಮಹದೇವ ತಿಳಿಸಿದರು.

Key words: mysore- Devanura Mahadeva -Minister -BC Nagesh