ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮಾಹಿತಿ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಿಸಿ ಡಿಸಿ ರೋಹಿಣಿ ಸಿಂಧೂರಿ ಆದೇಶ…

ಮೈಸೂರು,ಮೇ10,2021(www.justkannada.in): ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಹಿತಿ ನಿರ್ವಹಣೆಗೆ ನೋಡಲ್ ಅಧಿಕಾರಿಯನ್ನ ನೇಮಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.jk

ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಮಂಜುನಾಥ್ ಅವರನ್ನ ಆಕ್ಸಿಜನ್ ಮಾಹಿತಿ ನಿರ್ವಹಣೆಗೆ ನೋಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ. ಕೋವಿಡ್ ವಾರ್ ರೂಂ ಸಹಾಯವಾಣಿಯ ನೋಡಲ್ ಅಧಿಕಾರಿಯನ್ನಾಗಿ ಮಾಡಿದ ಆದೇಶ ಹಿಂಪಡೆದು ಆಕ್ಸಿಜನ್ ಮಾಹಿತಿಯ ನಿರ್ವಹಣೆ ಹೊಣೆ ನೀಡಿ  ಡಿಸಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. mysore-DC Rohini Sindhuri –orders- appointment -Nodal Officer - Oxygen -Information -Management

ಖಾಸಗಿ ಸಂಸ್ಥೆಗಳಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸರಬರಾಜಾಗುವ ಆಕ್ಸಿಜನ್ ನ ದೈನಂದಿನ ನಿರ್ವಹಣೆ ಕುರಿತು ಖಾಸಗಿ ಸಂಸ್ಥೆಗಳು ಹಾಗೂ ಜಿಲ್ಲಾಡಳಿತದ ನಡುವೆ ಸಮನ್ವಯ ಸಾಧಿಸುವ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ.

Key words: mysore-DC Rohini Sindhuri –orders- appointment -Nodal Officer – Oxygen -Information -Management