ಕಾರ್ ಸ್ಟೆಪ್ನಿ ಬದಲಿಸಿದ ರೋಹಿಣಿ ಸಿಂಧೂರಿ: ವೈರಲ್ ವಿಡಿಯೋದ ಅಸಲಿಯತ್ತು ಏನು ಗೊತ್ತ..?

ಮೈಸೂರು,ಫೆಬ್ರವರಿ,26,2021(www.justkannada.in):  ಮೈಸೂರು  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪಂಚರ್ ಆದ ಕಾರಿನ ಟೈರ್ ಬದಲಾಯಿಸುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿ ಎಲ್ಲ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು.jk

ಆದರೆ ಡಿಸಿ ರೋಹಿಣಿ ಸಿಂಧೂರಿ ಅವರು ಕಾರಿನ ಟೈರ್ ಬದಲಾಯಿಸುತ್ತಿದ್ದ ವಿಡಿಯೋದ ಅಸಲಿಯತ್ತು ಹೀಗಿದೆ…

ವಾರದ ಹಿಂದೆ ರಜೆ ಮೇಲೆ ತೆರಳಿದ್ದ ಡಿಸಿ ರೋಹಿಣಿ ಸಿಂಧೂರಿ, ಪತಿ ಜೊತೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಾಹನದ ಕಾರಿನ ಟೈರ್ ಪಂಚರ್ ಆಗಿತ್ತು. ಕಾರಿನಲ್ಲಿದ್ದ ಸ್ಟೆಪ್ನಿ ಟೈರ್ ಸಹ ಗಾಳಿ ಕಡಿಮೆ ಇದ್ದು, ಉಪಯೋಗಿಸಲು ಯೋಗ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸಿ ರೋಹಿಣಿ ಸಿಂಧೂರಿ ಅವರ ಪತಿ, ಬದಲಿ ಟೈರ್ ವ್ಯವಸ್ಥೆಗೆ ಮುಂದಾಗಿದ್ದರು. ಅಷ್ಟರಲ್ಲಿ ಸ್ಥಳದಲ್ಲಿದ್ದ ರೋಹಿಣಿ ಸಿಂಧೂರಿ ಜಾಕ್ ಸಹಾಯದಿಂದ ಪಂಚರ್ ಆಗಿದ್ದ ಟೈರ್ ಅನ್ನ ತೆಗೆಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ  ಅಲ್ಲಿದ್ದವರು ಆಶ್ಚರ್ಯ ಚಕಿತರಾಗಿ ವಿಡಿಯೋ ಮಾಡಿದರು.  ಇದೇ ವೈರಲ್ ಆದ ವಿಡಿಯೋದ ಅಸಲಿಯತ್ತು.mysore-dc-rohini-sindhuri-car-stepney-viral-video

Key words: mysore- DC-Rohini Sindhuri  – Car- Stepney-viral video