ಕೇಂದ್ರ ಸರ್ಕಾರ ತಮಿಳುನಾಡಿಗೆ ಆರ್ಥಿಕ ನೆರವು ನೀಡಿರುವುದು ಸರಿಯಿಲ್ಲ : ವಾಟಾಳ್ ನಾಗರಾಜ್ ಆಕ್ರೋಶ

ಬೆಂಗಳೂರು,ಫೆಬ್ರವರಿ,26,2021(www.justkannada.in) : ಕೇಂದ್ರ ಸರ್ಕಾರ ತಮಿಳುನಾಡಿಗೆ ಆರ್ಥಿಕ ನೆರವು ನೀಡಿರುವುದು ಸರಿಯಿಲ್ಲ. ಪ್ರಧಾನ ಮಂತ್ರಿಯವರು, ರಾಜ್ಯದ ಮುಖ್ಯಮಂತ್ರಿಯವರು, ಪಳನಿ ಸ್ವಾಮಿಯವರು ರಾಜಿನಾಮೆ ಕೊಡಲೇಬೇಕು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶವ್ಯಕ್ತಪಡಿಸಿದ್ದಾರೆ.

jkಇಂದು ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಭೂತ ದಹನ ಮಾಡಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ಸರ್ಕಾರ ಅಕ್ರಮವಾಗಿ ಕಾವೇರಿ ನದಿಗೆ ತಮಿಳುನಾಡಿನ ಎರಡು ನದಿಗಳು ಜೋಡಣೆ ಮಾಡಿರುವುದು ಅಪರಾಧ. ಕೇಂದ್ರ ಸರ್ಕಾರ ತಮಿಳುನಾಡಿಗೆ ಆರ್ಥಿಕ ನೆರವು ನೀಡಿರುವುದು ಸರಿಯಿಲ್ಲ. ಪ್ರಧಾನ ಮಂತ್ರಿಯವರು, ರಾಜ್ಯದ ಮುಖ್ಯಮಂತ್ರಿಯವರು, ಪಳನಿ ಸ್ವಾಮಿಯವರು ರಾಜಿನಾಮೆ ಕೊಡಲೇಬೇಕು ಎಂದು ಒತ್ತಾಯಿಸಿದ್ದಾರೆ.

Central-government-Tamil Nadu-Economic-Assistance-Given-Vatal Nagaraj 

ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಾಗೂ 27 ರಂದು ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಕನ್ನಡ ಪರ ಸಂಘಟನೆಗಳ ಸಭೆ ಕರೆಯಲಾಗಿದೆ. ಈ ಪ್ರತಿಭಟನೆಯಲ್ಲಿ ಕನ್ನಡ ಒಕ್ಕೂಟದ ಮುಖಂಡರುಗಳು ಭಾಗವಹಿಸಿದರು.

key words : Central-government-Tamil Nadu-Economic-Assistance-Given-Vatal Nagaraj