Sunday, September 20, 2026

BDA Apartments

ಮೈಸೂರು ಡಿಸಿ ಮತ್ತು ಪಾಲಿಕೆ ಆಯುಕ್ತರ ಜಟಾಪಟಿ : ಸಚಿವ ಎಸ್ ಟಿ ಸೋಮಶೇಖರ್ ರಾಜೀ...
Home Front Page ಮೈಸೂರು ಡಿಸಿ ಮತ್ತು ಪಾಲಿಕೆ ಆಯುಕ್ತರ ಜಟಾಪಟಿ : ಸಚಿವ ಎಸ್ ಟಿ ಸೋಮಶೇಖರ್ ರಾಜೀನಾಮೆಗೆ...

ಮೈಸೂರು ಡಿಸಿ ಮತ್ತು ಪಾಲಿಕೆ ಆಯುಕ್ತರ ಜಟಾಪಟಿ : ಸಚಿವ ಎಸ್ ಟಿ ಸೋಮಶೇಖರ್ ರಾಜೀನಾಮೆಗೆ ಆಗ್ರಹಿಸಿದ ಆರ್.ಧೃವನಾರಾಯಣ್.

ಮೈಸೂರು,ಜೂನ್,4,2021(www.justkannada.in): ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪನಾಗ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ರಾಜೀನಾಮೆ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆಗ್ರಹಿಸಿದ್ದಾರೆ.jk

ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಆರ್.ಧೃವನಾರಾಯಣ್,  ಇದೊಂದು ದುರಾದೃಷ್ಟಕರ ಬೆಳವಣಿಗೆ. ಮೈಸೂರಿಗೆ ಅದರದೇ ಆದ ಹೆಸರಿದೆ. ಇವತ್ತು ಮೈಸೂರಿನ ಜನತೆ ಬಡವಾಗಿದ್ದಾರೆ. ಬೆಂಗಳೂರಿ ಬಿಟ್ರೆ ಮೈಸೂರಿನಲ್ಲಿ ಹೆಚ್ಚಿನ ಪ್ರಕರಣ ಬರುತ್ತಿವೆ. ಆಡಳಿತ ನಿರ್ವಹಣೆಯಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳನ್ನ ಹಿಡಿತದಲ್ಲಿ ಇಟ್ಟುಕೊಂಡು ಕೆಲಸ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಬಿಜೆಪಿ ಶಾಸಕರು, ಉಸ್ತುವಾರಿ ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೂಡಲೇ ರಾಜೀನಾಮೆ ಕೊಡಿ..

ನನ್ನ ವ್ಯಾಪ್ತಿಯನ್ನು‌ ಮೀರಿ ಹೋಗಿದೆ, ನಾನು ಅಸಹಾಯಕನಾಗಿದ್ದೇನೆ ಎಂಬ ಉಸ್ತುವಾರಿ ಸಚಿವರ ಹೇಳಿಕೆ ವಿಚಾರ ಕುರಿತು ವಾಗ್ದಾಳಿ ನಡೆಸಿದ ಆರ್.ಧೃವನಾರಾಯಣ್, ನಿಮಗೆ ಅಧಿಕಾರ ನಡೆಸಲು ಅಸಮರ್ಥರಾಗಿದ್ದೀರಿ. ಕೂಡಲೇ ರಾಜೀನಾಮೆ ಕೊಡಿ. ನಿಮ್ಮ‌ಲ್ಲಿ ಅಸಹಾಯಕತೆ ಅರಾಜಕತೆ ಕಾಣುತ್ತಿದೆ. ಕೂಡಲೆ ರಾಜೀನಾಮೆ ನೀಡಿ. ನೀವು ಕಂಟ್ರೋಲ್ ಮಾಡೋಕೆ ಆಗಿಲ್ಲ ಅಂದರೆ ರಾಜೀನಾಮೆ ಕೊಡಿ ಎಂದು ಸಚಿವ ಎಸ್.ಟಿ ಸೋಮಶೇಖರ್ ಗೆ ಆಗ್ರಹಿಸಿದರು.

ಕರ್ನಾಟಕದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಯತ್ನಾಳ್ ಅವರೇ ಆರೋಪ ಮಾಡಿದ್ದಾರೆ. ಜವಾಬ್ದಾರಿ ಮರೆತು, ಭ್ರಷ್ಠಾಚಾರ ನಡೆಯುತ್ತಿದೆ. ಮೈಸೂರಿನಲ್ಲಿ ಕೋವಿಡ್ ಸ್ಕ್ಯಾಂಡಲ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್  ಒತ್ತಾಯಿಸಿದರು.

Key words: Mysore DC -corporation Commissioner-Minister- ST Somashekhar- former MP-R. Dhruvanarayan-resignation