‘ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್’ : ಶಿಲ್ಪಾನಾಗ್ ಬೆಂಬಲಿಸಿ ಪಾಲಿಕೆ ಸದಸ್ಯರು,ಸಿಬ್ಬಂದಿಗಳಿಂದ ಪ್ರತಿಭಟನೆ.

ಮೈಸೂರು,ಜೂನ್,4,2021(www.justkannada.in):  ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್  ಅವರಿಗೆ ಪಾಲಿಕೆ ಕಾರ್ಪೋರೇಟರ್‌ಗಳು,‌ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು  ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.jk

ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂಬ ಬ್ಯಾನರ್ ನಡಿ ಮೈಸೂರು ಪಾಲಿಕೆ ಕಾರ್ಪೋರೇಟರ್‌ಗಳು,‌ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು  ಶಿಲ್ಪನಾಗ್‌ ಅವರನ್ನ ಬೆಂಬಲಿಸಿ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

‘ತೊಲಗಲಿ ತೊಲಗಲಿ ಡಿಸಿ ತೊಲಗಲಿ’. ಉಳಿಸಿ ಉಳಿಸಿ ಮೈಸೂರು ಉಳಿಸಿ, ಐಎಎಸ್ ಅಧಿಕಾರಿ ಕನ್ನಡತಿ ಶಿಲ್ಪಾನಾಗ್ ಉಳಿಯಬೇಕು ಎಂದು ಘೋಷಣೆ ಕೂಗುವ ಮೂಲಕ ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

Key words: I Stand With Our Commissioner- Protest –mysore- corporator -staff – support -Shilpanag.