Saturday, September 26, 2026

BDA Apartments

ಈ ಬಾರಿ ಮೈಸೂರು ದಸರಾದಲ್ಲಿ ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ- ಶಾಸಕ ಅಶೋಕ್...
Home Front Page ಈ ಬಾರಿ ಮೈಸೂರು ದಸರಾದಲ್ಲಿ ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ- ಶಾಸಕ ಅಶೋಕ್ ರೈ

ಈ ಬಾರಿ ಮೈಸೂರು ದಸರಾದಲ್ಲಿ ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ- ಶಾಸಕ ಅಶೋಕ್ ರೈ

ಮೈಸೂರು,ಜೂನ್,26,2026 (www.justkannada.in):  ಮೈಸೂರು ದಸರಾದಲ್ಲಿ ಕಂಬಳ ಮಾಡಲು ಸಿಎಂ ಡಿಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ. ಈ ಬಾರಿ ವಿಜೃಂಭಣೆ ಕಂಬಳ ನಡೆಸುತ್ತೇವೆ ನಡೆಸುತ್ತೇವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದರು.

ಮೈಸೂರು ದಸರಾದಲ್ಲಿ ಕಂಬಳ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಇಂದು ಶಾಸಕ ಅಶೋಕ್ ರೈ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕಳೆದ ಬಾರಿಯೇ ಕಂಬಳ ಮಾಡಬೇಕಿತ್ತು. ಅಂತಿಮ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿ ಕಂಬಳಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸಾತಗಳ್ಳಿ ಹಾಗೂ ವಿಜಯನಗರ ಬಳಿ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸಾತಗಳ್ಳಿ ಬಳಿ ವಿಶಾಲವಾದ ಜಾಗ ಇದೆ. ವಾಹನಗಳ ಪಾರ್ಕಿಂಗ್ ಗೂ ಕೂಡ ಸೂಕ್ತ ಸ್ಥಳವಾಗಿದ್ದು ಆದರೆ ಇನ್ನು ಯಾವುದೇ ಸ್ಥಳವನ್ನ ಫೈನಲ್ ಮಾಡಿಲ್ಲ. ಸಿಎಂ ಅವರಿಗೆ ಸ್ಥಳದ ಕುರಿತು ಮಾಹಿತಿ ನೀಡುತ್ತೇವೆ ಎಂದರು.ಈ ಬಾರಿ ಮೈಸೂರು ದಸರಾದಲ್ಲಿ ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ chamundi chamundi 1

ಸಾತಗಳ್ಳಿ ಜಾಗ ಸೂಕ್ತ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಂಬಳ ಕೋಣಗಳು ಮನುಷ್ಯರ ನಡುವಿನ ಸಂಬಂಧ ಪ್ರೀತಿ. 150ರಿಂದ 200 ಕಂಬಳ ಕೋಣಗಳು ಬರಲಿದ್ದು ಎರಡು ದಿನ ಕಂಬಳ ನಡೆಯುತ್ತದೆ. ಹಗಲು ಮತ್ತು ರಾತ್ರಿ ಕಂಬಳ ನಡೆಯಲಿದೆ. ವಿಐಪಿ, ವಿವಿಐಪಿ ಪಾಸ್ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇದೆ. ಕಂಬಳದ ಜೊತೆ ದಕ್ಷಿಣ ಕನ್ನಡದ ಆಹಾರ ವೈವಿದ್ಯತೆ ಕುರಿತ ಸ್ಟಾಲ್ ಹಾಕಲಾಗುತ್ತದೆ. ಕಂಬಳ ಆಯೋಜನೆಗೆ 5 ರಿಂದ 8 ಕೋಟಿ ಖರ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ಕಂಬಳಕ್ಕೆ 15 ಕೋಟಿ ರೂ. ಖರ್ಚಾಗಿತ್ತು. ಕೆಲವು ಸ್ಪಾನ್ಸರ್ಸ್ ರನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.ಶಾಸಕ ಅಶೋಕ್ ರೈ kambala

8 ಸಾವಿರ ಜನ ಕುಳಿತು ವೀಕ್ಷಣೆ ಮಾಡಲು ಅವಕಾಶ ಮಾಡುತ್ತೇವೆ. ಗೆಲ್ಲುವ ಕೋಣಗಳಿಗೆ ಚಿನ್ನದ ಬಹುಮಾನ ಇರುತ್ತದೆ. ಕಂಬಳ ವೀಕ್ಷಣೆಗೆ ಯಾವುದೇ ರೀತಿಯ ದರ ಇಲ್ಲ ಸಂಪೂರ್ಣ ಉಚಿತವಾಗಿರುತ್ತದೆ. ಯಾವುದೇ ಅವಘಡಗಳು ಸಂಭವಿಸದ ಹಾಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಕೋಣಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ಈ ಬಾರಿ ಮೈಸೂರು ದಸರಾದಲ್ಲಿ ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ- ಶಾಸಕ ಅಶೋಕ್...

Key words: Kambala, Mysore Dasara, MLA, Ashok Rai,  inspects