ದಸರಾ ವಿದ್ಯುತ್ ದೀಪಾಲಂಕಾರದ ವೇಳೆ ಸೆಲ್ಫಿಗೆ ಮುಗಿ ಬೀಳುತ್ತಿರುವ ಹಿನ್ನೆಲೆ : ಎಂಎಲ್ ಸಿ ಹೆಚ್.ವಿಶ್ವನಾಥ್ ಅಸಮಾಧಾನ…

ಮೈಸೂರು,ಅಕ್ಟೋಬರ್,18,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಿನ್ನೆ ಚಾಲನೆ ದೊರೆತಿದೆ. ಕೊರೋನಾ ಮಹಾಮಾರಿ ಹಿನ್ನೆಲೆ ಈ ಬಾರಿ ದಸರಾ ಕಾರ್ಯಕ್ರಮ ಅರಮನೆ ಆವರಣಕ್ಕಷ್ಟೇ ಸೀಮಿತವಾಗಿದೆ. ಆದರೆ ನಗರದಲ್ಲೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಇದನ್ನ ನೋಡಲು ಸಾಕಷ್ಟು ಜನ ಆಗಮಿಸುತ್ತಿದ್ದಾರೆ.

ದಸರಾ ವಿದ್ಯುತ್ ದೀಪಾಲಂಕಾರ ನೋಡಲು ಆಗಮಿಸುವ ಜನರು ಕೊರೋನಾ ಲೆಕ್ಕಿಸದೇ  ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಹೀಗಾಗಿ  ವಿದ್ಯುತ್ ದೀಪಾಲಂಕಾರದ ವೇಳೆ ಸೆಲ್ಫಿಗೆ ಮುಗಿ ಬೀಳುತ್ತಿರುವ  ಬಗ್ಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, 540 ಜನ ಇರುವ ಸಂಸತ್‌ನಲ್ಲಿ 60 ಜನ ಒಳಗೆ ಬರಲು ಸಾಧ್ಯವಾಗಿಲ್ಲ. ಇಲ್ಲಿ ನಾವೇ ಎಲ್ಲೋ ಕೊರೋನಾ ಹೆಚ್ಚು ಮಾಡ್ತಿದ್ದೀವಿ ಅನಿಸುತ್ತೆ ಬೇಸರ ವ್ಯಕ್ತಪಡಿಸಿದ್ದಾರೆ.mysore-dasara-selfie-lighting-mlc-h-vishwanath

ಇದರಿಂದ ಸಣ್ಣ ಪುಟ್ಟ ವರ್ತಕರಿಗೆ ಅನುಕೂಲ ಆಗಬಹುದು. ಆದರೇ ಪ್ರವಾಸೋದ್ಯಮ ಏನು ಅಭಿವೃದ್ದಿಯಾಗಲ್ಲ. ಪ್ರಧಾನಿ ಮೋದಿಯೇ ಹೇಳಿದ್ದಾರೆ ಜೀವ, ಜೀವನ ಎರಡೂ ದೃಷ್ಠಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಅಂತ. ಹೀಗಾಗಿ ಇದನ್ನ ಅರ್ಥ ಮಾಡಿಕೊಂಡು ನಾವು ಹೆಜ್ಜೆ ಇಡಬೇಕಿದೆ‌ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ನಗರದಾದ್ಯಂತ ಪ್ರಮುಖ ವೃತ್ತ ಹಾಗೂ ಕಟ್ಟಡ ಸೇರಿದಂತೆ ಹಲವೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ, ಝಗಮಗಿಸುತ್ತಿರುವ ದೀಪಾಲಂಕಾರ ನೋಡಲು ಜನರು ಮುಗಿಬೀಳುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ

Key words: mysore dasara- selfie –lighting- MLC H. Vishwanath