ಮೈಸೂರು ದಸರಾ: ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿ ಬಿಡುಗಡೆ.

ಮೈಸೂರು,ಸೆಪ್ಟಂಬರ್, 1,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಗಜಪಯಣಕ್ಕೆ ಚಾಲನೆ ದೊರೆತಿದ್ದು ಗಜಪಡೆ ಆನೆಗಳು ಇಂದು ಕಾಡಿನಿಂದ ನಾಡಿನತ್ತ ಹೆಜ್ಜೆಯಿಟ್ಟಿವೆ. ಈ ಮಧ್ಯೆ ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ  14 ಆನೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ಫೈನಲ್ ಮಾಡಿದ್ದು, ಮೊದಲ ಹಂತದಲ್ಲಿ ಇಂದು 9 ಆನೆಗಳು ಆಗಮಿಸಿದರೇ  ಎರಡನೇ ಹಂತದಲ್ಲಿ ಉಳಿದ 5 ಆನೆಗಳ ಆಗಮಿಸಲಿವೆ. ಅಭಿಮನ್ಯು, ವಿಜಯ, ವರಲಕ್ಷ್ಮಿ, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಪ್ರಶಾಂತ್, ಸುಗ್ರೀವ, ಕಂಜನ್, ರೋಹಿತ್, ಲಕ್ಷ್ಮಿ, ಹಿರಣ್ಯ ಆನೆಗಳು ಫೈನಲ್ ಆಗಿವೆ.

ಈಗಾಗಲೇ ಅಭಿಮನ್ಯು, ವಿಜಯ, ಅರ್ಜುನ, ಧನಂಜಯ, ಭೀಮ, ಮಹೇಂದ್ರ, ಕಂಜನ್, ಹಿರಣ್ಯ, ವರಲಕ್ಷ್ಮಿ ಮೈಸೂರಿನತ್ತ ಪಯಣ ಬೆಳೆಸಿದ್ದು, ಎರಡನೇ ಹಂತದಲ್ಲಿ ಗೋಪಿ, ಲಕ್ಷ್ಮಿ, ರೋಹಿತ್, ಪ್ರಶಾಂತ್, ಸುಗ್ರೀವ ಆನೆಗಳು ಆಗಮಿಸಲಿವೆ. ಆನೆಗಳ ಜೊತೆ ಕಾವಾಡಿಗರು ಮತ್ತು ಮಾವುತರು ಹೆಸರು ಕೂಡ ಫೈನಲ್ ಆಗಿದೆ.

Key words: Mysore dasara-Release – list – elephants -participating – Jamboosawari.