Tuesday, September 22, 2026

BDA Apartments

ನಿನ್ನೆ ಸಭೆ ಮಾಡಿದವರು ಪಕ್ಷ ಕಟ್ಟಿ ಬೆಳೆಸಿದವರಲ್ಲ-ಬಿ.ಎಲ್ ಸಂತೋಷ್ ವಿರುದ್ದ...
Home Front Page ನಿನ್ನೆ ಸಭೆ ಮಾಡಿದವರು ಪಕ್ಷ ಕಟ್ಟಿ ಬೆಳೆಸಿದವರಲ್ಲ-ಬಿ.ಎಲ್ ಸಂತೋಷ್ ವಿರುದ್ದ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ.

ನಿನ್ನೆ ಸಭೆ ಮಾಡಿದವರು ಪಕ್ಷ ಕಟ್ಟಿ ಬೆಳೆಸಿದವರಲ್ಲ-ಬಿ.ಎಲ್ ಸಂತೋಷ್ ವಿರುದ್ದ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ.

ಬೆಂಗಳೂರು,ಸೆಪ್ಟಂಬರ್,1,2023(www.justkannada.in):  ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಮಾಜಿ ಶಾಸಕ, ಬಿಜೆಪಿ ಮುಖಂಡ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಸಭೆ ಮಾಡಿದವರು ಬಿಜೆಪಿ ಕಟ್ಟಿ ಬೆಳೆಸಿದವರಲ್ಲ. ಬಿಜೆಪಿಯಲ್ಲಿ ಲಿಂಗಾಯತರನ್ನೆಲ್ಲಾ ಮುಗಿಸಿದ್ರು. ಪಕ್ಷ  ಕೈಯಲ್ಲಿರಬೇಕೆಂದು ಬಿಎಸ್ ಯಡಿಯೂರಪ್ಪರನ್ನ ಸೈಡ್ ಲೈನ್ ಮಾಡಿದರು. ಬಿಎಲ್ ಸಂತೋಷ್ ಗೆ ತಾನು ಸಿಎಂ ಆಗಬೇಕು ಅಂತಾ ಇದೆ.  ಅವರು ಇಡೀ ಪಕ್ಷವನ್ನ ಕಂಟ್ರೋಲ್ ಮಾಡುತ್ತಿದ್ದಾರೆ ಬಿಎಲ್  ಸಂತೋಷ್ ಪರವಾಗಿ ಒಂದು ಗ್ಯಾಂಗ್ ಇದೆ  ಎಂದು ಕಿಡಿಕಾರಿದರು.ನಿನ್ನೆ ಸಭೆ ಮಾಡಿದವರು ಪಕ್ಷ ಕಟ್ಟಿ ಬೆಳೆಸಿದವರಲ್ಲ renukachariajh

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಬಿಎಸ್ ವೈ   ಶಾಪವೇ ಕಾರಣ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.

Key words: meeting- yesterday – not – built -party – BL Santhosh – MP Renukacharya.