ದಸರಾದ ಕೊನೆ ಹಂತದ ಸಿದ್ದತೆ ಪರಿಶೀಲನೆ: ಆರ್.ಆರ್ ನಗರದಲ್ಲಿ ಡಿ.ಕೆಶಿ ಗೆಲ್ಲಲು ಆಗಲ್ಲ ಎಂದ ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಅಕ್ಟೋಬರ್,16,2020(www.justkannada.in): ನೀತಿ ಸಂಹಿತೆ ಉಲ್ಲಂಘನೆಯಡಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ ಐಆರ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಆರ್.ಆರ್.ನಗರದಲ್ಲಿ ಡಿಕೆಶಿ ಗೆಲ್ಲೋಕಾಗೋಲ್ಲ. ಅದಕ್ಕೆ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ. ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರು ಎಫ್‌ಐಆರ್ ಹಾಕುತ್ತಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್ ಐ ಆರ್ ಹಾಕಿದ್ದರು. ಸ್ವಲ್ಪ ವ್ಯತ್ಯಾಸ ಆಗಿದ್ದರೆ ಮುನಿರತ್ನ ಜೈಲಿಗೆ ಹೋಗಬೇಕಿತ್ತು. ಈಗ ಕೋರ್ಟ್ ತೀರ್ಪು ಬಂದು ಮತ್ತೆ ಚುನಾವಣೆಗೆ ನಿಲ್ತಿದ್ದಾರೆ. ಹೀಗಾಗಿ ಡಿಕೆಶಿ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಅವರಿಗೆ ಆರ್ ಆರ್ ನಗರದಲ್ಲಿ ಗೆಲ್ಲೋಕೆ ಆಗೋಲ್ಲ ಅಂತ ಹೀಗೆಲ್ಲ ಮಾತನಾಡುತ್ತಾರೆ ಎಂದು ಟಾಂಗ್ ನೀಡಿದರು.

ನಾವು ಆಹ್ವಾನ ಮಾಡಿರುವ ಕೆಲವರು ದಸರಾಗೆ ಬರೋಲ್ಲ…

ನಾಳೆಯಿಂದ ದಸರಾ ಆರಂಭ ಕುರಿತು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ದಸರಾದ ಕೊನೆ ಹಂತದ ಸಿದ್ದತೆ ಪರಿಶೀಲನೆ ಮಾಡ್ತಿದ್ದೇವೆ. ಟೆಕ್ನಿಕಲ್ ಕಮಿಟಿಯ ಸೂಚನೆ  ಮೀರಿ ಒಂದೆ ಒಂದು ಕಾರ್ಯಕ್ರಮವನ್ನ ಮಾಡಿಲ್ಲ. ಜನ ಸೇರಿಸೋ ಪ್ರಶ್ನೆಯೇ ಇಲ್ಲ. ಉದ್ಘಾಟನೆಗೆ 200 ಮಂದಿ ಜಂಬೂಸವಾರಿಗೆ 300 ಮಂದಿ ಮಾತ್ರ ಇರುತ್ತಾರೆ. ಭಾಗಿಯಾಗುವ ಎಲ್ಲರಿಗು ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ. ಈ ಬಾರಿ ಎಲ್ಲವು ವರ್ಚುವಲ್ ಆಗಿ ನೇರಪ್ರಸಾರ ಆಗಲಿದೆ ಎಂದರು.mysore-dasara-preparation-check-rr-nagar-by-election-dk-shivakumar-minister-st-somashekar

ಇನ್ನು ನಾವು ಆಹ್ವಾನ ಮಾಡಿರುವ ಕೆಲವರು ದಸರಾಗೆ ಬರೋಲ್ಲ. ನಾವು ಬಂದು ಸಮಸ್ಯೆ ಆಗೋದು ಬೇಡ ಅಂತ ಹೇಳಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಯಾವ ಕಾರ್ಯಕ್ರಮವನ್ನು ಮಾಡೋದಿಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದರು.

Key words: mysore Dasara –preparation-check-RR Nagar-by-election—DK shivakumar-minister –ST Somashekar