ದೇಶದ ಮೊದಲ ಆಸ್ಕರ್‌ ವಿಜೇತ ವಸ್ತ್ರವಿನ್ಯಾಸಕಿ ಭಾನು ಅಥಯ್ಯಾ ನಿಧನ

ಬೆಂಗಳೂರು,ಅಕ್ಟೋಬರ್,16,2020(www.justkannada.in)  : ಭಾರತದ ಮೊದಲ ಆಸ್ಕರ್‌ ವಿಜೇತ ವಸ್ತ್ರವಿನ್ಯಾಸಕಿ ಭಾನು ಅಥಯ್ಯಾ (91) ನಿಧನರಾದರು.
ವಯೋಸಹದ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ.

jk-logo-justkannada-logo

ಗಾಂಧಿ ಚಿತ್ರದಲ್ಲಿನ ವಸ್ತ್ರವಿನ್ಯಾಸಕ್ಕಾಗಿ ಆಸ್ಕರ್‌ ಪ್ರಶಸ್ತಿ

1983ರಲ್ಲಿ ತೆರೆಕಂಡ ಹಾಲಿವುಡ್‌ ಸಿನೆಮಾ ಗಾಂಧಿ ಚಿತ್ರದಲ್ಲಿನ ವಸ್ತ್ರವಿನ್ಯಾಸಕ್ಕಾಗಿ ಅಥಯ್ಯಾಗೆ ಆ ಸಾಲಿನ ಅತ್ಯುತ್ತಮ ವಸ್ತ್ರವಿನ್ಯಾಸಕಿ ಆಸ್ಕರ್‌ ಪ್ರಶಸ್ತಿ ಲಭಿಸಿತ್ತು. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದ್ದ ಭಾನು ಅವರು 1956ರಲ್ಲಿ ಗುರು ದತ್ ಅವರ ಚಿತ್ರ ಸಿ.ಐ.ಡಿ. ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. Bhanu Athiya-country's-first-Oscar-winning -costume-designer-passed-away

100ಕ್ಕಿಂತಲೂ ಅಧಿಕ ಬಾಲಿವುಡ್‌ ಸಿನಿಮಾಗಳಿಗೆ ವಸ್ತ್ರವಿನ್ಯಾಸ

ಭಾನು ಅವರು 100ಕ್ಕಿಂತಲೂ ಅಧಿಕ ಬಾಲಿವುಡ್‌ ಸಿನಿಮಾಗಳಿಗೆ ವಸ್ತ್ರವಿನ್ಯಾಸ ಮಾಡಿದ್ದರು. ಅವರು, ಕೊನೆಯ ಬಾರಿ ಆಮಿರ್‌ ಖಾನ್‌ರ ಲಗಾನ್‌ ಹಾಗು ಶಾರೂಖ್‌ ಖಾನ್‌ರ ಸ್ವದೇಶ್ ಚಿತ್ರದ ವಸ್ತ್ರವಿನ್ಯಾಸ ಮಾಡಿದ್ದರು. ಅದಕ್ಕಾಗಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದರು.

key words : Bhanu Athiya-country’s-first-Oscar-winning -costume-designer-passed-away