ವಿಶ್ವ ವಿಖ್ಯಾತ ಮೈಸೂರು ದಸರಾಗೆ ದಿನಗಣನೆ: ಕುಸ್ತಿ ಪಂದ್ಯಾವಳಿ ನಡೆಸುವಂತೆ ಸರ್ಕಾರಕ್ಕೆ ಪೈಲ್ವಾನ್‌ ಗಳ ಒತ್ತಾಯ.

ಮೈಸೂರು,ಸೆಪ್ಟಂಬರ್,22,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ದಸರಾ ಕುಸ್ತಿ ಪಂದ್ಯಾವಳಿ ನಡೆಸುವಂತೆ ಸರ್ಕಾರಕ್ಕೆ ಪೈಲ್ವಾನ್‌ ಗಳು ಒತ್ತಾಯ ಮಾಡಿದ್ದಾರೆ.

ಗರಡಿಮನೆಗಳ ನಗರಿ ಮೈಸೂರಿನಲ್ಲಿ ನಾಡಕುಸ್ತಿಗೆ ಪೈಲ್ವಾನ್‌ ಗಳು ರೆಡಿಯಾಗಿದ್ದು  ಕುಸ್ತಿ ಪಂದ್ಯಾವಳಿ ಆಯೋಜನೆ ಸಂಬಂಧ ಇದೇ ತಿಂಗಳ 28 ಕ್ಕೆ ಸಭೆ ನಡೆಯಲಿದೆ. ಕುಸ್ತಿ ಪಂದ್ಯಾವಳಿ ಅಯೋಜನೆಗಾಗಿ ಸಚಿವರು, ರಾಜವಂಶಸ್ಥರ ಜೊತೆ ಉಸ್ತಾದ್‌ ಗಳು ಮಾತುಕತೆ ನಡೆಸಲಿದ್ದಾರೆ.

ಕಳೆದ ಬಾರಿ ಕೋವಿಡ್ ಕಾರಣದಿಂದ ಕುಸ್ತಿ ಪಂದ್ಯಾವಳಿ ನಡೆಸಲಿಲ್ಲ. ಈ ಬಾರಿ ಕೋವಿಡ್ 19 ಕಡಿಮೆಯಾಗಿದೆ. ಈಗಲೂ ಸರಳ ದಸರಾ ಆಚರಣೆ ಘೋಷಣೆಯಾಗಿದೆ. ದಸರಾ ಕುಸ್ತಿಗಾಗಿ ಪೈಲ್ವಾನ್‌ಗಳು ಸಾಧನೆ ಮಾಡಿ ಸಜ್ಜಾಗಿದ್ದಾರೆ. ಪೈಲ್ವಾನ್‌ಗಳಿಗೆ ದಸರಾದ ಅವಕಾಶಗಳೇ ಮುಖ್ಯ. ನಾಡ ಕುಸ್ತಿಗಾಗಿ ವರ್ಷಪೂರ್ತಿ ತಯಾರಿ ನಡೆಸಿದ್ದಾರೆ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿ ಆಗಬಾರದು. ಸರ್ಕಾರ ಕುಸ್ತಿ ನಡೆಸಬೇಕು. ಈ ಕುರಿತು ಇದೇ ತಿಂಗಳ 28 ಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ರನ್ನ ಭೇಟಿ ಮಾಡುತ್ತಿದ್ದೆವೆ. ಕೊರೋನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಾಡ ಕುಸ್ತಿ ನಡೆಸುವಂತೆ ಮನವಿ ಮಾಡುತ್ತೇವೆ ಎಂದು ಉಸ್ತಾದ್ ಟೈಗರ್ ಬಾಲಾಜಿ ತಿಳಿಸಿದರು.

ದಸರಾ ಆಚರಣೆಯಲ್ಲಿ ವಜ್ರ ಮುಷ್ಟಿ ಮುಖ್ಯವಾಗಿರುತ್ತದೆ. ವಜ್ರ ಮುಷ್ಟಿ ಕಾಳಗ ಎಂದಿನಂತೆ ಸಾಂಪ್ರದಾಯಿಕವಾಗಿ ನಡೆಯಲಿದೆ. ಇದಕ್ಕಾಗಿ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಉಸ್ತಾದ್ ಟೈಗರ್ ಬಾಲಾಜಿ ತಿಳಿಸಿದರು.

Key words: Mysore Dasara -Pilwans -government – wrestle- tournament