ಈ ಬಾರಿ ಮೈಸೂರು ದಸರಾ ಆಚರಣೆ ಬಗ್ಗೆ ಎಂಎಲ್ ಸಿ ಹೆಚ್. ವಿಶ್ವನಾಥ್ ಕೊಟ್ಟ ಸಲಹೆ ಇದು…!

ಮೈಸೂರು,ಆ,25,2020(www.justkannada.in): ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳವಾಗಿ ಆಚರಿಸಲು ತೀರ್ಮಾನಿಸಿರುವುದಾಗಿ ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. jk-logo-justkannada-logo

ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸರಳ ದಸರಾ ಆಚರಣೆಯೇ ಸೂಕ್ತ ಎಂದಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್,  ಈ ಬಾರಿ ದಸರಾ ಸರಳವಾಗಿ, ಶಾಸ್ತ್ರೋಸ್ತ್ರವಾಗಿ ದಸರಾ ಮಹೋತ್ಸವ ನಡೆಯಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.mysore-dasara-mlc-h-vishwanath-advice

ಇಂತಹ ಸಂದರ್ಭದಲ್ಲಿ ಹೆಚ್ಚು ಜನರು ಸೇರುವುದು ಒಳ್ಳೆಯದಲ್ಲ. ಹೆಚ್ಚು ಜನ ಸೇರಿದರೇ ನಾವೇ ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಸರಳವಾಗಿ ದಸರಾ ಆಚರಣೆ ಮಾಡುವುದೇ ಸೂಕ್ತ. ಶಿಷ್ಟ ರಕ್ಷಣೆ, ದೃಷ್ಟ ಶಿಕ್ಷಣೆ ಎನ್ನುವ ರೀತಿಯಲ್ಲಿ ಆಚರಣೆ ಮಾಡಲಿ. ಚಾಮುಂಡೇಶ್ವರಿಯನ್ನ ಶ್ರದ್ಧಾಭಕ್ತಿಯಿಂದ ಆರಾಧಿಸಲಿ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

Key words: mysore- dasara-MLC-H.Vishwanath-advice