ಅರಮನೆ ಅಂಗಳಕ್ಕೆ ಆಗಮಿಸಿದ ದಸರಾ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಿದ ಜಿಲ್ಲಾಡಳಿತ

ಮೈಸೂರು,ಸೆಪ್ಟಂಬರ್,16,2021(www.justkannada.in):  ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ಅರಮನೆ ಅಂಗಳಕ್ಕೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಜಿಲ್ಲಾಡಳಿತ ವತಿಯಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಹೆಜ್ಜೆಹಾಕಲು ಕಾಡಿನಿಂದ ನಾಡಿಗೆ ಬಂದು ನಗರದ ಅರಣ್ಯಭವನದಲ್ಲಿ ಬೀಡುಬಿಟ್ಟಿದ್ಧ ದಸರಾ ಗಜಪಡೆ ಆನೆಗಳನ್ನ ಇಂದು ಮೈಸೂರು ಅರಮನೆಗೆ ಕರೆತರಲಾಯಿತು. ಅರಮನೆ ಅಂಗಳ ಪ್ರವೇಶಿಸಿದ ದಸರಾ ಗಜಪಡೆಯ ಆನೆಗಳಿಗೆ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಅರಮನೆ ಬ್ಯಾಂಡ್, ಮಂಗಳ ವಾದ್ಯ, ಪೂರ್ಣಕುಂಭ ಸ್ವಾಗತದ ಮೂಲಕ ಆನೆಗಳನ್ನ ಅರಮನೆ ಆಡಳಿತ ಮಂಡಳಿ ಬರಮಾಡಿಕೊಂಡಿತು. ಕಬ್ಬು,ಬೆಲ್ಲ, ತೆಂಗಿನ ಕಾಯಿ ಕೊಟ್ಟು, ಪೂಜೆ ಸಲ್ಲಿಸಿ ಆನೆಗಳಿಗೆ ಸ್ವಾಗತ ಕೋರಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಬಗಾದಿ ಗೌತಮ್. ಸಂಸದ ಪ್ರತಾಪ್ ಸಿಂಹ, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು.

ನಗರದ ಸದ್ದುಗದ್ದಲಕ್ಕೆ ಬೆಚ್ಚಿದ ಅಶ್ವತ್ಥಾಮ.

ಇದೇ ಮೊದಲ ಬಾರಿಗೆ ದಸರಾ ಪಾಲ್ಗೊಳ್ಳಲು ಬಂದಿರುವ ಅಶ್ವತ್ಥಾಮ ಆನೆ ನಗರದ ಸದ್ದುಗದ್ದಲಕ್ಕೆ ಬೆಚ್ಚಿ ಫುಟ್‌ಪಾತ್ ಸೇರಿದ ಘಟನೆ ನಡೆಯಿತು. ಅರಣ್ಯಭವನದಿಂದ ಅರಮನೆಗೆ ಬರುವ ವೇಳೆ ಅಶ್ವತ್ಹಾಮ ರಸ್ತೆಯಿಂದ ಫುಟ್‌ಪಾತ್ ಗೆ ತೆರಳಿದ. ಈ ವೇಳೆ  ಮಾವುತ ಕಾವಾಡಿ ಅಶ್ವತ್ಹಾಮ ಆನೆಯನ್ನ ನಿಯಂತ್ರಿಸಿ ಫುಟ್‌ ಪಾತ್‌ ನಿಂದ ಕೆಳಗಿಳಿಸಿ ರಸ್ತೆಯಲ್ಲಿ ಆನೆಯನ್ನ ಕರೆದುಕೊಂಡು ಆರಮನೆಗೆ ಬಂದರು.

Key words: mysore-dasara-gajapade-palace-pooja-districk administration

ENGLISH SUMMARY…

Traditional welcome for Dasara elephants in front of Ambavilasa Palace
Mysuru, September 16, 2021 (www.justkannada.in): The elephants that arrived in Mysuru to take part in the world-famous Dasara Mahotsav, led by captain Abhimanyu were received with a traditional welcome by the Mysuru District Administration.
The elephants were brought from the forest to the Arany Bhavan, which were brought to the Mysuru palace today. They were received with a traditional welcome in front of the Jayamarthanda gate in the Ambavilasa Palace. The District Administration officials led by Mysuru District In-charge Minister S.T. Somashekar welcomed the elephants.
Keywords: Dasara elephants/ Mysuru/ palace/ traditional welcome