ಮೈಸೂರು ದಸರಾ ಮಹೋತ್ಸವ: ಇಂದು ಗಜಪಡೆಗಿಲ್ಲ ತಾಲೀಮು…..

ಮೈಸೂರು,ಸೆ,28,2019(www.justkannada.in): ಮಹಾಲಯ ಅಮಾವಾಸ್ಯೆ ಹಿನ್ನೆಲೆ ಇಂದು ಗಜಪಡೆಯ ತಾಲೀಮು ರದ್ದು ಮಾಡಲಾಗಿದೆ.

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬು ಸವಾರಿಯಲ್ಲಿ ಹೆಜ್ಜೆ ಹಾಕುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಗೆ ದಿನನಿತ್ಯ ತಾಲೀಮು ನೀಡಲಾಗುತ್ತಿತ್ತು. ಪ್ರತಿನಿತ್ಯ ಅರಮನೆ ಆವರಣದಿಂದ ಬನ್ನಿಮಂಟಪದ ವರೆಗೆ‌ ತಾಲೀಮು ಮಾಡಿಸಲಾಗುತ್ತದೆ. ಆದರೆ ಇಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆ,  ಗಜಪಡೆಗೆ ತಾಲೀಮು ರದ್ದು ಮಾಡಲಾಗಿದೆ.

ಪ್ರತೀ ಅಮಾವಾಸ್ಯೆಯಂದು ಗಜಪಡೆ ಆನೆಗಳು ಅರಮನೆ ಕೋಟೆಯಿಂದ  ಹೊರಗಡೆ ಬರುವುದಿಲ್ಲ. ಕಳೆದ ಬಾರಿಯೂ ಸಹ ಅಮಾವಾಸ್ಯೆಯಂದು ತಾಲೀಮು ರದ್ದು ಮಾಡಲಾಗಿತ್ತು. ತಾಲೀಮು ಇಲ್ಲದ ಹಿನ್ನೆಲೆ ಅರಮನೆ ಆವರಣದಲ್ಲೇ ಗಜಪಡೆ ವಾಕ್ ಮುಗಿಸಿ ರೆಸ್ಟ್ ಮಾಡುತ್ತಿವೆ. ದಸರಾ ಗಜಪಡೆ ಅರಮನೆ ಆವರಣಕ್ಕೆ ಬಂದ ಮೇಲೆ ಇಂದು ಎರಡನೇ ಅಮಾವಾಸ್ಯೆಯಾಗಿದೆ.

Key words: Mysore Dasara –gajapade-no workout -today.