Friday, September 11, 2026

BDA Apartments

ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸಲು ” ಆಂಕೊ ಕೇರ್” ಎಂಬ ಹೊಸ ಮೊಬೈಲ್ ಅಪ್ಲಿಕ...
Home DASARA-2019 ಮೈಸೂರು ದಸರಾ ಮಹೋತ್ಸವ: ಮಾವುತರು ಮತ್ತು ಕಾವಾಡಿಗರಿಗೆ ಅತಿಥಿ ಸತ್ಕಾರ…..

ಮೈಸೂರು ದಸರಾ ಮಹೋತ್ಸವ: ಮಾವುತರು ಮತ್ತು ಕಾವಾಡಿಗರಿಗೆ ಅತಿಥಿ ಸತ್ಕಾರ…..

ಮೈಸೂರು,ಸೆ,25,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ದಸರಾ ಗಜಪಡೆಗಳಿಗೆ ನಿತ್ಯ ತಾಲೀಮು ನಡೆಸಲಾಗುತ್ತಿದ್ದು, ಈ ನಡುವೆ ಇಂದು ದಸರಾ ಗಜಪಡೆಯ ಸಾರಥಿಗಳಿಗೆ ಅತಿಥಿ ಸತ್ಕಾರ ಮಾಡಲಾಯಿತು.

ಅನ್ವೇಷಣೆ ಸೇವಾ ಟ್ರಸ್ಟ್ ವತಿಯಿಂದ ದಸರಾ ಆನೆಗಳ ಮಾವುತರು ಕಾವಡಿಗರಿಗೆ ಸತ್ಕಾರ ಸಮಾರಂಭ ಆಯೋಜಿಸಲಾಗಿತ್ತು. ಜಯಚಾಮರಾಜ ಒಡೆಯರ್ ಜನ್ಮಶತಮಾನೋತ್ಸವ ನೆನಪಿನ ಅಂಗವಾಗಿ ಅರಮನೆ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾವುತರು ಮತ್ತು ಕವಾಡಿಗಳಿಗೆ ಮೈಸೂರು ಪೇಟ ತೊಡಿಸಿ ಗೌರವ ಸಲ್ಲಿಸಿ ಸಿಹಿ, ಉಡುಗೊರೆ ನೀಡುವ ಮೂಲಕ ಗಣ್ಯರು ಸತ್ಕಾರ ಮಾಡಿದರು. ಕಾರ್ಯಕ್ರಮದಲ್ಲಿ ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ,ಅನ್ವೇಷಣೆ ಸೇವಾ ಟ್ರಸ್ಟ್ ಅಧ್ಯಕ್ಷರು ಡಾ. ಎಂ.ಜಿ.ಆರ್.ಅರಸ್ , ಡಿಸಿಎಫ್ ಅಲೆಕ್ಸಾಂಡರ್ ಭಾಗಿಯಾಗಿದ್ದರು.

Key words: mysore dasara-gajapade-mavutha’s –kavadi’s- Treat