ಮೈಸೂರು,ಸೆಪ್ಟಂಬರ್,15,2025 (www.justkannada.in): ಸಾಂಸ್ಕೃತಿಕ ನಗರಿ ಮೈಸೂರು ದಸರಾ ಹಬ್ಬಕ್ಕೆ ಸಜ್ಜಾಗುತ್ತಿದ್ದು ಈ ಮಧ್ಯೆ ಇಂದು ಗಜಪಡೆಗೆ ಸಿಡಿಮದ್ದು ತಾಲೀಮು ನಡೆಸಲಾಯಿತು.
ದಸರಾ ವಸ್ತು ಪ್ರದರ್ಶನ ಮೈದಾನದ ವಾಹನಗಳ ನಿಲುಗಡೆ ಸ್ಥಳದಲ್ಲಿ ಗಜಪಡೆಗೆ ಸಿಡಿಮದ್ದು ತಾಲೀಮು ನಡೆಸಲಾಯಿತು. ತಾಲೀಮಿನಲ್ಲಿ ಎಲ್ಲಾ 14 ಆನೆಗಳು, ಆಶ್ವರೋಹಿ ದಳ ಭಾಗಿಯಾಗಿದ್ದು, ಇದೇ ಮೊದಲ ಬಾರಿ ಸಿಡಿಮದ್ದು ತಾಲೀಮಿನಲ್ಲಿ ಹೇಮಾವತಿ, ರೂಪ ಮತ್ತು ಶ್ರೀಕಂಠ ಆನೆಗಳು ಪಾಲ್ಗೊಂಡಿದ್ದವು. ಸಿಡಿಮದ್ದಿನ ಸದ್ದಿಗೆ ಶ್ರೀಕಂಠ, ಹೇಮಾವತಿ ಆನೆಗಳು ಮತ್ತು ಅಶ್ವಾರೋಹಿ ದಳ ಬೆದರಿದ ಘಟನೆ ನಡೆಯಿತು. ಇನ್ನು ಸಿಡಿಮದ್ದು ತಾಲೀಮು ಫೈರಿಂಗ್ ಕಾರ್ಯದಲ್ಲಿ ಸುಮಾರು 30 ಕ್ಕೂ ಹೆಚ್ಚು ಸಿಎಆರ್ ಪೋಲಿಸರು ಭಾಗಿಯಾಗಿದ್ದರು.
ಸಿಡಿಮದ್ದು ತಾಲೀಮು ಕಾರ್ಯಕ್ರಮದಲ್ಲಿ ಪೋಲಿಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಬಿಂದುಮಣಿ, ಸುಂದರರಾಜ್, ಡಿಸಿಎಫ್ ಪ್ರಭಗೌಡ ಸೇರಿದಂತೆ ಪೋಲಿಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.
Key words: Mysore Dasara, Fireworks drill, Gajapade