ಮೈಸೂರು,ಆಗಸ್ಟ್,6,2025 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ಮೈಸೂರಿನ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆಗಸ್ಟ್ 10 ರಂದು ಅರಮನೆಗೆ ಪ್ರವೇಶಿಸಲಿದೆ.
ಈಗಾಗಲೇ ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ರಿಲ್ಯಾಕ್ಸ್ ಮೂಡಿನಲ್ಲಿವೆ. ಆ.7 ರಂದು ಗಜಪಡೆಯ ಅರಮನೆ ಪ್ರವೇಶಕ್ಕೆ ದಿನಾಂಕ ನಿಗದಿಯಾಗಿದ್ದು ಆದರೆ ಅದನ್ನು ಮುಂದೂಡಿಕೆ ಮಾಡಲಾಗಿದೆ. ಆಗಸ್ಟ್ 10ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.
ಆಗಸ್ಟ್ 10 ಭಾನುವಾರ ಸಂಜೆ 6.45 ರಿಂದ 7.20 ವೇಳೆಗೆ ಆನೆಗಳು ಅರಮನೆ ಪ್ರವೇಶಿಸಲಿವೆ. ಪ್ರತಿ ಬಾರಿ ಬೆಳಗ್ಗೆ ಹೊತ್ತು ಪ್ರವೇಶ ಮಾಡುತ್ತಿದ್ದ ಗಜಪಡೆ ಈ ಬಾರಿ ಸಂಜೆಯಲ್ಲಿ ಅರಮನೆ ಆವರಣಕ್ಕೆ ಎಂಟ್ರಿ ಕೊಡಲಿವೆ.
ಭಾನುವಾರ ಅರಮನೆ ವಿದ್ಯುತ್ ದೀಪಾಲಂಕಾರದ ಸಂದರ್ಭದಲ್ಲಿ ಒಳ ಪ್ರವೇಶಿಸಲಿದ್ದು ಅರಮನೆ ಆವರಣದಲ್ಲಿ ಮಾವುತರು, ಕಾವಾಡಿಗಳ ವಾಸ್ತವ್ಯಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಜಿಲ್ಲಾಡಳಿತ ಅನುಕೂಲ ಮಾಡಿಕೊಟ್ಟಿದೆ.
ಗಜಪಡೆಗೆ 2.04 ಕೋಟಿ ಇನ್ಸೂರೆನ್ಸ್
ಮೈಸೂರು ದಸರಾ ಗಜಪಡೆ ಆನೆಗಳಿಗೆ 2.04 ಕೋಟಿ ಇನ್ಸೂರೆನ್ಸ್ ಮಾಡಿಸಲಾಗಿದೆ . 14 ಆನೆ, 14 ಮಾವುತರು, 14 ಕಾವಾಡಿಗರಿಗೆ ಜಿಲ್ಲಾಡಳಿತದಿಂದ ದಿ ನ್ಯೂ ಇಂಡಿಯನ್ ಅಶ್ಯೂರೆನ್ಸ್ ಕಂಪನಿ ವತಿಯಿಂದ ವಿಮೆ ಮಾಡಿಸಲಾಗಿದೆ. ಈಗಾಗಲೇ ವಿಮಾ ಕಂಪನಿಗೆ 67 ಸಾವಿರ ಪ್ರೀಮಿಯಂ ಪಾವತಿ ಮಾಡಲಾಗಿದೆ.
ದಸರಾ ಸಂದರ್ಭದಲ್ಲಿ ಸಾರ್ವಜನಿಕರಿಗೆ, ಆಸ್ತಿ ಪಾಸ್ತಿಗೆ ತೊಂದರೆಯಾದರೆ ಸಾರ್ವಜನಿಕರು ಸೇರಿ, ಆಸ್ತಿ ಪಾಸ್ತಿಗೂ ವಿಮೆ ಮಾಡಿಸಲಾಗಿದೆ. ಅಭಿಮನ್ಯು ಸೇರಿ ಗಂಡಾನೆಗಳಿಗೆ ಒಟ್ಟಾರೆ 50 ಲಕ್ಷ ರೂಪಾಯಿ, ಹೆಣ್ಣಾನೆಗಳಿಗೆ 18 ಲಕ್ಷ ವಿಮೆ ಮಾಡಿಸಲಾಗಿದೆ.
Key words: Mysore dasara, Gajapade, Palace, Insurance