ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ದಸರಾ ಗಜಪಡೆ

ಮೈಸೂರು ,ಆಗಸ್ಟ್,5,2025 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆ ಆನೆಗಳು ಇದೀಗ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿವೆ.

ಹೌದು  ಮೈಸೂರಿನ ಅಶೋಕಪುರಂ ನ ಅರಣ್ಯಭವನದಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿವೆ.  ವೀರನಹೊಸಹಳ್ಳಿಯಲ್ಲಿ ನಡೆದ ಗಜಪಯಣ ಸಮಾರಂಭದ ಬಳಿಕ  ನಿನ್ನೆ ಸಂಜೆ ಲಾರಿಗಳ ಮೂಲಕ ಮೈಸೂರಿನ ಅರಣ್ಯ ಭವನಕ್ಕೆ ಬಂದಿಳಿದ ಆನೆಗಳಿಗೆ  ಪ್ರಯಾಣದಿಂದ ಬಳಲಿದ ಹಿನ್ನೆಲೆಯಲ್ಲಿ ಇಂದು ಪೂರ್ಣ ವಿಶ್ರಾಂತಿ ನೀಡಲಾಗಿದೆ.

ಆಗಸ್ಟ್‌ 10 ರಂದು ದಸರಾ ಗಜಪಡೆ ಅರಮನೆ ಆವರಣ ಪ್ರವೇಶಿಸಲಿದ್ದು,  ಅಲ್ಲಿಯವರೆಗೂ ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯಲಿವೆ. ಆನೆಗಳ ಜೊತೆಗೆ ಮಾವುತರು ಕಾವಾಡಿಗಳು ವಾಸ್ತವ್ಯ ಹೂಡಲು ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ಅರಣ್ಯಾಧಿಕಾರಿ ಡಾ.ಪ್ರಭುಗೌಡ, ಈ ಬಾರಿ ಕೂಡ ಅಭಿಮನ್ಯು ಅಂಬಾರಿ  ಹೊರುತ್ತಾನೆ. ಬ್ಯಾಕ್ ಅಪ್ ಆಗಿ ಮೂರು ಆನೆಗಳಿಗೆ ತಾಲೀಮು ನಡೆಸುತ್ತೇವೆ. ಎಲ್ಲಾ ಆನೆಗಳು ಆರೋಗ್ಯದಿಂದ ಇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Key words: Mysore dasara, Gajapade, relax mood