Sunday, August 23, 2026

BDA Apartments

Home Cinema ಮೈಸೂರು ದಸರಾ ಮಹೋತ್ಸವ: ಅ.9 ಕ್ಕೆ ಚಲನಚಿತ್ರೋತ್ಸವದ ಪಾಸ್ ವಿತರಣೆ

ಮೈಸೂರು ದಸರಾ ಮಹೋತ್ಸವ: ಅ.9 ಕ್ಕೆ ಚಲನಚಿತ್ರೋತ್ಸವದ ಪಾಸ್ ವಿತರಣೆ

ಮೈಸೂರು, ಅಕ್ಟೋಬರ್ 07, 2023 (www.justkannada.in): ಮೈಸೂರು ದಸರಾ ಮಹೋತ್ಸವ 2023 ರ ಹಿನ್ನೆಲೆಯಲ್ಲಿ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಅಕ್ಟೋಬರ್ 16 ರಿಂದ 22 ರವರೆಗೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿ ಆರ್ ಸಿ ಪರದೆಗಳಲ್ಲಿ ಚಲನಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದೆ.

ಈ ಸಂಬಂಧ ಅ.9 ರಂದು (ಸೋಮವಾರ) ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ ನಗರದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಸಿನಿಮಾ ಪ್ರಿಯರಿಗೆ ಚಲನ ಚಿತ್ರೋತ್ಸವ ಪ್ರದರ್ಶನದ ಪಾಸ್ ವಿತರಣೆ ಮಾಡಲಾಗುವುದು

ಚಲನಚಿತ್ರೋತ್ಸವ ಪಾಸ್ ದರ ಸಾಮಾನ್ಯರಿಗೆ 500 ರೂ.ಗಳಾಗಿದ್ದು ಸ್ಟೂಡೆಂಟ್ಸ್ ಗಳಿಗೆ 300 ರೂ.ಗಳಾಗಿರುತ್ತವೆ. ಈ ಪಾಸ್ ಏಳು ದಿನಗಳವರೆಗೂ ಚಾಲ್ತಿಯಲ್ಲಿರುತ್ತದೆ.

ಪಾಸ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಪ್ರತಿಯನ್ನು ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಶ್ರೇಯಸ್, ಮೊ.ಸಂ: 7411564510 ಅನ್ನು ಸಂಪರ್ಕಿಸಬಹುದು ಎಂದು ಚಲನಚಿತ್ರೋತ್ಸವ ಉಪಸಮಿತಿಯ ವಿಶೇಷಾಧಿಕಾರಿಗಳಾದ ಎಂ ಕೆ ಸವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.