ಮೈಸೂರು ದಸರಾ ಆನೆಗಳ ಪಟ್ಟಿ ಬಿಡುಗಡೆ: ದಸರಾ ಉದ್ಘಾಟನೆ, ಜಂಬೂಸವಾರಿ, ದೀಪಾಲಂಕಾರದ ಬಗ್ಗೆ  ಮಾಹಿತಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಸೆಪ್ಟಂಬರ್,8,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಈ ಬಾರಿಯೂ  ಸರಳ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದ್ದು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ.

ಮೈಸೂರಿನ ಅಂಬಾ ವಿಲಾಸ ಅರಮನೆಯ ಸಭಾಂಗಣದಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ದಸರಾ ಆನೆಗಳ ಪಟ್ಟಿ ಬಿಡುಗಡೆ ಮಾಡಿದರು.

ಈ ಸಾಲಿನ ದಸರಾದಲ್ಲಿ ಅಂಬಾರಿ ಹೊರಲಿರುವ ಕ್ಯಾಪ್ಟನ್ ಮತ್ತಿಗೋಡು ಶಿಬಿರದ ಅಭಿಮನ್ಯು, ಗೋಪಾಲಸ್ವಾಮಿ, ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಆನೆ ಭಾಗಿ‌ಯಾಗಲಿವೆ.

ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ ಎಂಟ್ರಿ ಕೊಡುತ್ತಿದ್ದು, ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದೆ. ವೀರನಹೊಸಹಳ್ಳಿಯಿಂದ ಮೈಸೂರಿನ ಅರಣ್ಯ ಭನವನಕ್ಕೆ ಗಜಪಡೆ ಆಗಮಿಸಲಿವೆ.

ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ‌ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ವೀರನಹೊಸಹಳ್ಳಿಯಿಂದ  ಎಂಟು ಆನೆ ಕರೆ ತರುತ್ತೇವೆ. ಸೆಪ್ಟಂಬರ್ 13 ರಂದು ಬೆಳಿಗ್ಗೆ 9.30ಕ್ಕೆ ಗಜಪಡೆಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸೆಪ್ಟಂಬರ್ 16 ರಂದು ಅರಮನೆ ಬಳಿ ಗಜಪಡೆ ಸ್ವಾಗತ ಕೋರಲಾಗುತ್ತದೆ. ಈ ನಡುವೆ ದಸರಾ ಜಂಬೂ ಸವಾರಿ ಮುಗಿದ ಬಳಿಕ ಅಕ್ಟೋಬರ್ 16 ರಂದು ಗಜಪಡೆಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಗಜಪಡೆ ನಿರ್ವಹಣೆಗೆ 50 ಲಕ್ಷ ರೂಪಾಯಿ ಆನೆಗಳ ಪೋಷಣೆಗೆ ಮೀಸಲಿಡಲಾಗುತ್ತದೆ ಎಂದು ತಿಳಿಸಿದರು.

ಅ 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದ್ದು, 9 ದಿನವೂ ಅರಮನೆ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂಜನಗೂಡಿನ ದೇವಸ್ಥಾನದ ಒಳಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 15 ರ ಸಂಜೆ 4.36 ರಿಂದ 4.44 ನಂದಿ ಪೂಜೆ ನಡೆಯಲಿದ್ದು, ಬಳಿಕ ಸಂಜೆ 5 ರಿಂದ 5.36 ಜಂಬೂ ಸವಾರಿ ಮೆರವಣಿಗೆ ಸಾಗಲಿದೆ. ಇನ್ನು ಚಾಮುಂಡಿ ಉತ್ಸಹ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಅರಮನೆಗೆ ಮೆರವಣಿಗೆ ಮೂಲಕ ತರಲಾಗುವುದು. ಎಲ್ಲರೂ ನಾಡದೇವತೆ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಜಾಸ್ತಿ ಜನಕ್ಕೆ ಅವಕಾಶ ಕೊಡಲು ಮುಂದಿನ ದಿನಗಳಲ್ಲಿ ಕೇಳುತ್ತೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಅ.7ರಿಂದ 15 ವರೆಗೆ ಈ ಭಾರಿ ದೀಪಾಲಂಕಾರ.

ಈ ಸಾಲಿನ ದಸರಾ ಮಹೋತ್ಸವದಲ್ಲಿ ಅ.7ರಿಂದ 15 ವರೆಗೆ ದೀಪಾಲಂಕಾರವಿರಲಿದೆ. ಈ ಬಾರಿ ನಗರದ ಒಳಗೆ 100 ಕಿ.ಮೀ ಹಾಗೂ ಒಟ್ಟು 157 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತದೆ. ಇನ್ನು ಈ ಬಾರಿ 3 ಸ್ತಬ್ದಚಿತ್ರಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಸಚಿವ ಎಸ್.ಟಿ‌. ಸೋಮಶೇಖರ್ ತಿಳಿಸಿದರು.

ENGLISH SUMMARY…

Mysuru Dasara elephants list released: District In-charge Minister releases program details
Mysuru, September 8, 2021 (www.justkannada.in): The State Government has decided to keep the historic Mysuru Dasara celebrations as a low-key affair this year also. In the meantime, the list of elephants that will take part in the celebrations was released today by District In-charge Minister S.T. Somashekar.
The Dasara Executive Committee meeting was held at Ambavilas palace auditorium today. The list of elephants that will take part in this year’s Dasara Mahotsav are as follows: Abhimanyu (lead), Gopalaswamy of Mattigodu camp, Vikram from Anekaadu camp, Kaveri, Dhananjaya from the Dubare camp, Ashwathama from the Doddaharave camp in Nagarahole, Chaitra and Lakshmi from the Bandipur Rampura camp.
34-year-old Ashwathama has gained entry for the first time. Lakshmi, the youngest elephant is taking part for the second time. The elephants’ procession (Gajapade) will start from Veeranahosahalli to Mysuru.
The Gajapade will commence on September 13 at 9.30 by offering pooja at Veernahosahalli and will arrive at Mysuru on September 16. It will be welcomed in front of the Ambavilasa palace as usual.
The inauguration of the Dasara celebrations will be held on October 7 at the Chamundi hills. Cultural programs will be held on all nine days inside the palace premises. Cultural programs will also be conducted inside the historic Nanjangud temple. The Nandi pooja will be held from 4.36 to 4.44 pm, on October 15 and the Jamboo Savari will commence between 5.00 pm to 5.36 pm.
Keywords: Mysore Dasara/ programs/ elephants list announced

Key words: Mysore Dasara- Elephants- List -Minister -ST Somashekhar -Jamboswari – lighting.