ಮೈಸೂರು ದಸರಾ ಯಶಸ್ವಿ: ಗಜಪಡೆಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡುಗೆ.  

ಮೈಸೂರು,ಅಕ್ಟೋಬರ್,7,2022(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿದ್ದು ಈ ನಡುವೆ ಐತಿಹಾಸಿಕ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ಧ ದಸರಾ ಗಜಪಡೆಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ದಸರಾ ಆರಂಭಕ್ಕೂ ಒಂದುವರೆ ತಿಂಗಳಿಗೂ ಮೊದಲೇ ಕಾಡಿನಿಂದ ಮೈಸೂರಿಗೆ ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿದ್ಧ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದವು.  ಕ್ಯಾಪ್ಟನ್ ಅಭಿಮನ್ಯು 750 ಕೆ.ಜಿ ಚಿನ್ನದ ಅಂಬಾರಿ ಹೊತ್ತು ಹೆಜ್ಜೆಹಾಕಿದ್ದನು.  ವಿವಿಧೆಡೆಯಿಂದ ಆಗಮಿಸಿದ್ಧ ಲಕ್ಷಾಂತರ  ಜನರು ಜಂಬೂ ಸವಾರಿ ಮೆರವಣಿಗೆಯನ್ನ ಕಣ್ತುಂಬಿಕೊಂಡರು.

ಇನ್ನು ಇಂದು ಅರಮನೆ ಆವರಣದಲ್ಲಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಗಾದಿ ಗೌತಮ್, ಡಿಸಿಎಫ್ ಕರಿಕಾಳನ್ ಸೇರಿದಂತೆ ಇತರೆ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲಾಡಳಿತದ ವತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಲಾಯಿತು.

Key words: Mysore Dasara-District administration- traditional puja – Gajapade

ENGLISH SUMMARY…

Mysuru Dasara successful: Send off to dasara jumbos with traditional pooja by District Administration
Mysuru, October 7, 2022 (www.justkannada.in): The historic Mysuru Dasara celebrations was conducted in a grand way this year successfully. The dasara jumbos which had taken part in the Dasara procession were seen off by the district administration by offering traditional pooja.
The dasara jumbos led by Captain Abhimany had arrived at Mysuru and had were sheltered at the Mysuru palace about one and a half month ago. The lead dasara jumbo Abhimanyu led the other tuskers by carrying 750 kg golden howda. The whole Dasara events were witnessed by lakhs of people.
Traditional poojas were offered to the jumbos at the Ambavilasa palace premises by the district administration today. Deputy Commissioner Bagadi Gowtham, DCF Karikalan and other forest department officials were present. The Forest Department officials and staff were felicitated by the district administration.
Keywords: Dasara jumbos/ send off/ Mysuru district administration