ದಸರಾ ಆಚರಿಸಿ ಕೊರೋನಾ ಜಾಸ್ತಿಯಾದ್ರೆ ಜನರೇ ಸರ್ಕಾರದ ವಿರುದ್ದ ಪ್ರಕರಣ ದಾಖಲಿಸ್ತಾರೆ- ಎಂಎಲ್ ಸಿ ಹೆಚ್.ವಿಶ್ವನಾಥ್…

ಮೈಸೂರು,ಅಕ್ಟೋಬರ್,7,2020(www.justkannada.in): ಸರಳಾ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗೆ ಮುಂದಾಗಿರುವ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.jk-logo-justkannada-logo

ಮೈಸೂರು ದಸರಾ ಆಚರಿಸಿ ಕೊರೋನಾ ಜಾಸ್ತಿಯಾದರೆ ಸರ್ಕಾರದ ವಿರುದ್ದ  ಜನರೇ ಪ್ರಕರಣ ದಾಖಲಿಸಲಿದ್ದಾರೆ ಎಂದು ಸರ್ಕಾರಕ್ಕೆ ಹೆಚ್.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ದಸರಾ ಹಿನ್ನೆಲೆ ಮೈಸೂರು ನಗರದಲ್ಲಿ ದೀಪಾಲಂಕಾರ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಯಾರ ಅನುಮತಿ ಪಡೆದು ಊರ ತುಂಬಾ ಲೈಟ್ ಹಾಕಿದ್ದೀರಾ ? ಆರೋಗ್ಯ ಇಲಾಖೆ ಅನುಮತಿ ಪಡೆದಿದ್ದೀರಾ ? ಏಕೆ ಈ ರೀತಿ ಹಠಕ್ಕೆ ಬಿದ್ದಿದ್ದೀರಾ ? ಕೊರೊನಾ ಮಹಾಸ್ಪೋಟವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಕಾರಣಕ್ಕೂ ದಸರಾಗೆ  ಹೆಚ್ಚಿನ ಜನಸಂದಣಿ ಬೇಡ. ಇದರಿಂದ ನಾಡಹಬ್ಬ ದಸರೆಗೂ ಕಳಂಕ ವಿಶ್ವವ್ಯಾಪಿ ಮೈಸೂರಿಗೂ ಕಳಂಕ ಬರಲಿದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ ಎಂದು ಸರ್ಕಾರಕ್ಕೆ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸಲಹೆ ನೀಡಿದ್ದಾರೆ.mysore-dasara-corona-people-case-against-government-mlc-h-vishwanath

ಅಕ್ಟೋಬರ್ 15 ರಿಂದ ಶಾಲೆ ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಕೇಂದ್ರ ಸರ್ಕಾರ ರಾಜ್ಯಗಳ ಪರಿಸ್ಥಿತಿ ನೋಡಿ ಶಾಲೆ ತೆರೆಯುವ ಬಗ್ಗೆ ತೀರ್ಮಾನಿಸಲು ಹೇಳಿದೆ. ಆದರೆ ಕರ್ನಾಟಕದಲ್ಲಿ ಈಗಲೇ ಶಾಲೆ ತೆರೆಯುವ ಆತುರ ಬೇಡ. ಇದರ ಬಗ್ಗೆ ಆರೋಗ್ಯ ಇಲಾಖೆ ಕ್ಲಿಯರೆನ್ಸ್ ನೀಡಲಿ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸೇರಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರಬೇಕು. ಈ ವಿಚಾರದಲ್ಲಿ ಮೂರು ಇಲಾಖೆಗಳ ಪಾತ್ರ ತುಂಬಾ ಮಹತ್ವದ್ದು ಎಂದರು.

Key words: mysore-Dasara-Corona – People – case -against – government- MLC –H.VISHWANATH.