ಮೈಸೂರು ದಸರಾ ಆಚರಣೆ ಪೂರ್ವಭಾವಿ ಸಭೆ: ಲಾರಿಯಲ್ಲಿ ಆನೆಗಳನ್ನ ಕರೆ ತರುವುದಕ್ಕೆ ಎಂಎಲ್ ಸಿ ಹೆಚ್.ವಿಶ್ವನಾಥ್ ಆಕ್ಷೇಪ.

ಮೈಸೂರು,ಆಗಸ್ಟ್,8,2023(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಸಂಬಂಧ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಪೂರ್ವಭಾವಿ ಸಂಭೆ ನಡೆಯುತ್ತಿದ್ದು ಮೈಸೂರು ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಜಿಟಿ ದೇವೇಗೌಡ, ದರ್ಶನ್ ದೃವನಾರಾಯಣ್, ಎಂಎಲ್ ಸಿ ವಿಶ್ವನಾಥ್, ಮಂಜೇಗೌಡ, ಮರೀತೀಬ್ಬೆಗೌಡ, ಮೇಯರ್ ಶಿವಕುಮಾರ್, ಡಿಸಿ ಕೆವಿ ರಾಜೇಂದ್ರ, ಅರಣ್ಯಧಿಕಾರಿ ಮಾಲತಿ ಪ್ರಿಯ, ನಗರ ಪೋಲೀಸ್ ಕಮಿಷನರ್ ರಮೇಶ್ ಬಾನೊತ್, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ.

ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಸರಾ ಗಜಪಯಣ ಸಮಾರಂಭದ ದಿನಾಂಕ ಕುರಿತು ಹಿರಿಯ ಅರಣ್ಯಾಧಿಕಾರಿ ಡಾ ಮಾಲತಿ ಪ್ರಿಯಾ ಮಾಹಿತಿ ನೀಡಿದರು.  ಈ ವೇಳೆ ಮಧ್ಯೆ ಪ್ರವೇಶಿಸಿ  ದಸರಾ ಗಜಪಡೆಯನ್ನುಲಾರಿಗಳ ಮೂಲಕ ಮೈಸೂರಿಗೆ ಕರೆ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಆನೆಗಳನ್ನು ಲಾರಿಯಲ್ಲಿ ಕರೆ ತರುವುದು ಸಂಪ್ರದಾಯವಲ್ಲ. ಈ ಹಿಂದೆ ಮೈಸೂರು ಮಹಾರಾಜರು ಆನೆಗಳಿಗೆ ಫಲ ತಾಂಬೂಲ ನೀಡಿ ಕಾಲ್ನಡಿಗೆಯಲ್ಲಿ ಕರೆ ತರುತ್ತಿದ್ದರು. ಆನೆಗಳನ್ನು ಕಾಲ್ನಡಿಗೆಯಲ್ಲಿಯೇ ಕರೆ ತಂದರೆ ಒಳ್ಳೆಯದು ಎಂದು ಸಲಹೆ ನೀಡಿದರು.

ಇದಕ್ಕೆ ಒಪ್ಪದ ಅರಣ್ಯಾಧಿಕಾರಿ ಮಾಲತಿಪ್ರಿಯಾ. ಗೈಡ್ ಲೈನ್ಸ್ ಪ್ರಕಾರ ಆನೆಗಳನ್ನು ಕಾಲ್ನಡಿಗೆಯಲ್ಲಿ ಕರೆ ತರಲು ಸಾಧ್ಯವಿಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿ ಡಾ ಕೆ. ವಿ ರಾಜೇಂದ್ರ ಕೂಡ ಸಹಮತ ವ್ಯಕ್ತಪಡಿಸಿದರು. ಅವಕಾಶ ಸಿಕ್ಕರೆ ಆನೆಗಳನ್ನು ಕಾಲ್ನಡಿಗೆ ಮೂಲಕ ಕರೆ ತರಲು ಪ್ರಯತ್ನಿಸೋಣ ಎಂದು ಸಚಿವ ಮಹದೇವಪ್ಪ  ಹೇಳಿದರು.

Key words: Mysore Dasara – celebration -pre-meeting- MLC H. Vishwanath- objected -elephants