ಮೈಸೂರು ದಸರಾ: ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆ ಆಯೋಜನೆ..

ಮೈಸೂರು,ಆಗಸ್ಟ್,14,2023(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ 2023 ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ  ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿದೆ.

ಈ ಕುರಿತು ಸಚಿವರು,ಶಾಸಕರು,ವಿಧಾನಪರಿಷತ್ ಸದಸ್ಯರು ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿದರು. ಆಕರ್ಷಕ ಲೋಗೋ, ಒಂದು ಸಾಲುನುಡಿ, ಶುಭ ಸಂದೇಶ, ಮೈಸೂರಿನ ನೆಚ್ಚಿನ ತಾಣದ ಬಗ್ಗೆ ಬರಹ ಸ್ಪರ್ಧೆಯ ವಿಷಯವಾಗಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಹುಮಾನ ನೀಡಲಾಗುತ್ತದೆ.

ಮೊದಲ ಬಹುಮಾನ 30 ಸಾವಿರ ನಗದು,ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 05 ಸಾವಿರ ರೂ. ನಿಗದಿ ಮಾಡಲಾಗಿದೆ. ನೋಂದಣಿಗೆ ಕೊನೆ ದಿನಾಂಕ 31/08/2023. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/09/2023.

Key words: Mysore dasara- Branding- Mysore -Competition