ಮೈಸೂರು ದಸರಾ: ಅ.22 ಮತ್ತು 23ರಂದು ಏರ್ ಶೋ: ಒಂದು ದಿನ ಉಚಿತ ಪ್ರವೇಶ..

ಮೈಸೂರು,ಅಕ್ಟೋಬರ್,17,2023(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆ ಈ ಬಾರಿ ಏರ್ ಶೋ ನಡೆಯಲಿದ್ದು ಏರ್ ಶೋಗೆ ಎಲ್ಲರಿಗೂ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.

ಬನ್ನಿಮಂಟಪದಲ್ಲಿ ಸೂರ್ಯ ಕಿರಣ್ ತಂಡದಿಂದ ಅಕ್ಟೋಬರ್ 22 ಹಾಗೂ ಅಕ್ಟೋಬರ್ 23ರಂದು ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಏರ್ ಶೋ ನಡೆಯಲಿದೆ. ಅಕ್ಟೋಬರ್ 22 ರಂದು ಪಾಸ್ ಇರುವುದಿಲ್ಲ ಎಲ್ಲರಿಗೂ ಉಚಿತ ಪ್ರವೇಶವಿರಲಿದೆ.  ಮೊದಲು ಬಂದವರಿಗೆ ಆದ್ಯತೆ ನೀಡಲಾಗಿದ್ದು 3 ಗಂಟೆಯ ನಂತರ ಬಂದವರಿಗೆ ಪ್ರವೇಶವಿರುವುದಿಲ್ಲ.

ಅಕ್ಟೋಬರ್ 23ರಂದು ಪಂಜಿನ ಕವಾಯತು ಪಾಸ್‌ ಮೂಲಕ ಏರ್ ಶೋ ನೋಡಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಪರ ವಿರೋಧ ಹಿನ್ನೆಲೆ ಈ ಬಾರಿ ಸ್ಟ್ರೀಟ್ ಫೆಸ್ಟಿವಲ್‌ ಗೆ ಬ್ರೇಕ್ ಹಾಕಲಾಗಿದ್ದು, ದಸರೆ ಮುಗಿದ ನಂತರ ಬ್ರ್ಯಾಂಡ್ ಮೈಸೂರು ಹೆಸರಿನಲ್ಲಿ ನಿರಂತರ ಕಾರ್ಯಕ್ರಮ ನಡೆಯಲಿದೆ.

Key words: Mysore Dasara-Air show -Oct 22  – One day -free entry..