ಮೈಸೂರು ದಸರಾ ಅಧಿಕಾರಿಗಳ ದರ್ಬಾರ್ ಆಗಿದೆ- ಪರೋಕ್ಷವಾಗಿ ಕಲಾವಿದರ ಹಣಕ್ಕೂ ಕಮಿಷನ್ ಕೊಡುವ ಪರಿಸ್ಥಿತಿ ಎಂದ ಹೆಚ್.ವಿಶ್ವನಾಥ್.

ಮೈಸೂರು,ಅಕ್ಟೋಬರ್,17,2023(www.justkannada.in):  ಮೈಸೂರು ದಸರಾ ಅಧಿಕಾರಿಗಳ ದರ್ಬಾರ್ ಆಗಿದೆ. ಸಂಪೂರ್ಣ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್,  ದಸರಾ ದೀಪಾಲಂಕಾರ ಚೆನ್ನಾಗಿದೆ. ನಾನೂ ‌ಕೂಡ ಏಳು ದಸರಾ ನಡೆಸಿದ್ದೇನೆ. ಯಾವ ಉಪಸಮಿತಿಯಲ್ಲಿ ಜನಪ್ರತಿನಿಧಿಗಳು ಇಲ್ಲ. ಸಂಪೂರ್ಣ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಸಾಹಿತ್ಯದಿಂದ ವಿಧಾನಪರಿಷತ್ ಗೆ ನಾಮಂಕಿತನಾಗಿದ್ದೇನೆ. ನನ್ನನ್ನ ಹೇಗೆ ದಸರಾದಲ್ಲಿ ಬಳಸಿಕೊಳ್ಳಬೇಕು.? ಕಾರ್ಯಕ್ರಮಗಳು ಸರಿಯಾಗಿ ಆಗುತ್ತಿಲ್ಲ. ನಾವೂ ಹಿಂದೆ ಮಾಡಿದ್ದು ಬಿಟ್ಟರೇ‌ ಹೊಸದೇನು‌ ದಸರಾದಲ್ಲಿ ಆಗ್ತಿಲ್ಲ. ಕಲಾವಿದರು ಕಾರ್ಯಕ್ರಮಗಳನ್ನ ಕೊಡೋದೆ ಧನ್ಯ ಅಂತಿದ್ರು. ಹೋಗುವಾಗ ಗೌರವ ಧನ ಕೊಡುತ್ತಿದ್ದರು. ಆದರೆ ಇವಾಗ ನೀನು ವಸಿ ತಕೋ ನಾನು ವಸಿ ತಕೋ ಅನ್ನೋ ಆಗೆ ಆಗಿದೆ. ಸಂಸ್ಕೃತಿಯನ್ನ ಹಾಳುಮಾಡುವ ಕೆಲಸ ಆಗುತ್ತಿದೆ ಎನ್ನುವ ಮೂಲಕ ಹೆಚ್.ವಿಶ್ವನಾಥ್  ಪರೋಕ್ಷವಾಗಿ ಕಲಾವಿದರ ಹಣಕ್ಕು ಕಮಿಷನ್ ಕೊಡುವ ಪರಿಸ್ಥಿತಿ ಎಂದರು.

ನಾನು‌ ರಾಜ್ಯಾಧ್ಯಕ್ಷನಾಗಿದ್ರೆ ಕುಮಾರಸ್ವಾಮಿಯನ್ನ 6 ವರ್ಷ ಅಮಾನತು ಮಾಡ್ತಿದ್ದೆ..

ಜೆಡಿಎಸ್ ನಿಂದ ಹೆಚ್.ಡಿ ಕುಮಾರಸ್ವಾಮಿ  ಉಚ್ಚಾಟನೆ ಬಗ್ಗೆ ಸಿಎಂ  ಇಬ್ರಾಹಿಂ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಸಿ.ಎಂ.ಇಬ್ರಾಹಿಂ ಸ್ಟ್ಯಾಂಡ್ ಕರೆಕ್ಟಾಗಿದೆ. ನಾನು‌ ರಾಜ್ಯಾಧ್ಯಕ್ಷನಾಗಿದ್ರೆ ಕುಮಾರಸ್ವಾಮಿಯನ್ನ 6 ವರ್ಷ ಅಮಾನತು ಮಾಡ್ತಿದ್ದೆ ಎಂದು ಸಿಎಂ ಇಬ್ರಾಹಿಂ ಪರ ಬ್ಯಾಟ್ ಬೀಸಿದರು.

ಇಬ್ರಾಹಿಂ ಸ್ಟ್ಯಾಂಡ್ ಕರೆಕ್ಟಾಗಿದೆ. ರಾಷ್ಟ್ರೀಯ ಅಧ್ಯಕ್ಷರಿಗೆ ವಿಧೇಯನಾಗಿರುತ್ತೇನೆ. ಕುಮಾರಸ್ವಾಮಿಗೆ ನನಗೂ ಸಂಬಂಧ ಇಲ್ಲ ಅನ್ನೋದು ನಿಜ. ಕುಮಾರಸ್ವಾಮಿ ವೈಕ್ತಿಯವಾಗಿ ಮೈತ್ರಿ ಬಗ್ಗೆ ಮಾತಾಡಿಕೊಂಡಿದ್ದಾರೆ. ಜ್ಯಾತ್ಯಾತೀತ ಅನ್ನೋ ಅರ್ಥವನ್ನೆ ತೆಗೆದು‌ ಹಾಕಿದ್ದಾರೆ. ಸಿ.ಎಂ.ಇಬ್ರಾಹಿಂ ತೆಗೆದುಕೊಂಡ ನಿಲುವು ರಾಜಕೀಯ ಹಿನ್ನಲೆಗೆ ಸರಿಯಾಗಿದೆ. ಸಿಎಂ ಇಬ್ರಾಹಿಂದ ಉಚ್ಚಾಟನೆ ಮಾಡುವ ಅಧಿಕಾರ ಇದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಅಮಾನತು ಮಾಡುವ ಅಧಿಕಾರವಿದೆ. ಜ್ಯಾತ್ಯಾತೀತ ಶಕ್ತಿ ಕೊಲೆ ಮಾಡಿ, ಜಾತಿವಾದಿ, ಕೋಮುವಾದಿ ಬಿಜೆಪಿ ಜೊತೆ ಮದುವೆ ಹಾಕ್ತೀನಿ ಅಂತಿದ್ದಾರೆ ಕುಮಾರಸ್ವಾಮಿ. ಅಂತಹವರನ್ನ ಅಮಾನತು ಮಾಡುವ ಅಧಿಕಾರ ಇಬ್ರಾಹಿಂಗೆ ಇದ್ದೆ ಇದೆ. ನಾನು ಈಗ ರಾಜ್ಯಾಧ್ಯಕ್ಷನಾಗಿದ್ರೆ ಕುಮಾರಸ್ವಾಮಿಯನ್ನ 6 ವರ್ಷಗಳ ಕಾಲ ಉಚ್ಛಾಟನೆ ಮಾಡ್ತಿದ್ದೆ. ಅದನ್ನ ಸಿ.ಎಂ ಇಬ್ರಾಹಿಂ ಮಾಡ್ತಾರೆ. ಕ್ರಮ ಆಗೇ ಆಗುತ್ತೆ, ಯಾಕೆ ಆಗಲ್ಲ. ಯಾರು ಕುಮಾರಸ್ವಾಮಿಯೊಂದಿಗೆ ಚಮಚಾಗಿರಿ ಮಾಡೋರು ಅವರು ಮೈತ್ರಿಗೆ ಒಪ್ಪುತ್ತಾರೆ ಅಷ್ಟೇ ಎಂದು ಎಚ್ ವಿಶ್ವನಾಥ್ ಹೇಳಿದರು.

Key words: MLC- H. Vishwanath – Mysore Dasara – officials