ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರುತ್ತೆ- ಸಚಿವ ಈಶ್ವರ್ ಖಂಡ್ರೆ ಘೋಷಣೆ.

ಮೈಸೂರು,ಸೆಪ್ಟಂಬರ್,1,2023(www.jutkannada.in): ಗಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಟ್ಟಿದ್ದು, ಐತಿಹಾಸಿದ ದಸರಾ ಪ್ರಾರಂಭವಾಗಿದೆ. ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರುತ್ತೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಘೋಷಣೆ ಮಾಡಿದರು.

ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ ಇಂದು ಗಜಪಯಣಕ್ಕೆ ಚಾಲನೆ ದೊರೆತ ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ,  ಕಾಡಿನಿಂದ ನಾಡಿಗೆ ಆನೆಗಳು ತೆರಳುತ್ತವೆ. ಕಂಜನ್ ಈ ಬಾರಿ ದಸಾರಗೆ ಹೊಸ ಆನೆ ಸೇರ್ಪಡೆಯಾಗಿದೆ. ಒಂದುವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತದೆ. ನಿಶಾನೆ ಆನೆಯನ್ನ ಇನ್ನೂ ನಿರ್ಧಾರ ಮಾಡಿಲ್ಲ. ನಾಡ ಅದಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದರು.

ಆನೆ ದಾಳಿಗೆ ಶಾರ್ಪ್ ಶೂಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ,  ಪ್ರಕರಣದ ತನಿಖೆಗೆ ಆದೇಶ ನೀಡಿದ್ದೇನೆ. ಬಹಳ ದೊಡ್ಡ ದುರಂತ ಆಗಿದೆ. ಅರಣ್ಯ ಇಲಾಖೆಗೆ ದೊಡ್ಡ ಹಾನಿಯಾಗಿದೆ. ಸರ್ಕಾರದ ವತಿಯಿಂದ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಸರ್ಕಾರ ಕುಟುಂಬಸ್ಥರ ಪರವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.

Key words: mysore dasara- Abhimanyu – elephant – Minister -Ishwar Khandre