ಮೈಸೂರು ದಸರಾ-2020: ಅರಮನೆಯಲ್ಲಿ ನಾಳೆ ಸಿಂಹಾಸನ ಜೋಡಣಾ ಕಾರ್ಯ…

ಮೈಸೂರು,ಸೆಪ್ಟಂಬರ್,17,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ನಾಡಹಬ್ಬ  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿ ಸರಳ ಮತ್ತು ಸಂಪ್ರದಾಯಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ನಡುವೆ  ಮೈಸೂರು ಅರಮನೆಯಲ್ಲಿ ನಾಳೆ ಸಿಂಹಾಸನಾ ಜೋಡಣಾ ಕಾರ್ಯ ನಡೆಯಲಿದೆ.jk-logo-justkannada-logo

ಈ ಬಾರಿ ಜಂಬೂ ಸವಾರಿಯೂ ಸಹ ಅರಮನೆಯೊಳಗೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಎಂದಿನಂತೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಇರಲಿದ್ದು ಈ ಹಿನ್ನೆಲೆಯಲ್ಲಿ ಅರಮನೆಯಲ್ಲಿ ನಾಳೆ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ.

ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾರ್ಗದರ್ಶನದಲ್ಲಿ ನಾಳೆ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರೊಳಗಿನ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನೆರವೇರಲಿದೆ. ಸಿಂಹಾಸನ ಜೋಡಣಾ ಕಾರ್ಯದಲ್ಲಿ ಅರಮನೆಯ ರಾಜ ಪರಿವಾರ ಹಾಗೂ ಸಿಬ್ಬಂದಿ ಮಾತ್ರ ಹಾಜರಾಗಲಿದ್ದಾರೆ. ನಾಳೆ ಮುಂಜಾನೆಯಿಂದಲೇ ಪೂಜಾ ವಿಧಿವಿಧಾನಗಳು ನಡೆಯಲಿವೆ.mysore-dasara-2020-tomorrow-mysore-palace-simhasana-joit-kasagi-darbar

ಇನ್ನು ನವರಾತ್ರಿ ದಿನಗಳಲ್ಲಿ ವೈಭವದ ಖಾಸಗಿ ದರ್ಬಾರ್ ನಡೆಯಲಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ  ಒಡೆಯರ್ ರಿಂದ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

Key words: Mysore Dasara -2020-tomorrow –mysore Palace-simhasana- joit-kasagi darbar