ಈ ಬಾರಿ 10 ದಿನಗಳು ಮಾತ್ರ ಜಗಮಗಿಸಲಿದೆ ದಸರಾ ದೀಪಾಲಂಕಾರ…

ಮೈಸೂರು,ಅಕ್ಟೋಬರ್,10,2020(www.justkiannada.in): ಕೊರೋನಾ ಹಿನ್ನೆಲೆ  ಮೈಸೂರು ದಸರಾವನ್ನ ಸರಳದಲ್ಲೇ ಅತಿ ಸರಳ ದಸರಾ ಆಚರಣೆ ಮಾಡಲು ಮುಂದಾಗಿರುವ ಸರ್ಕಾರ ಈ ಬಾರಿ ದೀಪಾಲಂಕಾರವನ್ನ 10ದಿನಗಳಿಗೆ ಮಾತ್ರ ಸೀಮಿತಗೊಳಿಸಿದೆ.jk-logo-justkannada-logo

ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ದೀಪಾಲಂಕಾರ. ನಗರದೆಲ್ಲೆಡೆ ದೀಪಾಲಂಕಾರದಿಂದ ಮೈಸೂರು ದಸರಾದ ಸಂಭ್ರಮ ಕಳಗಟ್ಟಲಿದೆ. ಆದರೆ ಈ ಬಾರಿ ಕೊರೋನಾ ಎಲ್ಲದಕ್ಕೂ ಅಡ್ಡಿಯನ್ನುಂಟು ಮಾಡಿದೆ. ಹೀಗಾಗಿ 10 ದಿನಗಳು ಮಾತ್ರ ದಸರಾ ದೀಪಾಲಂಕಾರ ಜಗಮಗಿಸಲಿದೆ.mysore-dasara-2020-electric-lighting-decoration-only-10-days

ಪ್ರತಿದಿನ ಕೇವಲ ಎರಡೇ ಗಂಟೆಗಳು ಮಾತ್ರ ದೀಪಾಲಂಕಾರ ಜಗಮಗಿಸಲಿದ್ದು ಈ ಬಗ್ಗೆ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಮಾಡಿದೆ. ಸಂಜೆ 7ರಿಂದ 9 ಗಂಟೆಗಳ ವರಗೆ ಮಾತ್ರ ವಿದ್ಯುತ್ ದೀಪಾಲಂಕಾರ ರಂಜಿಸಲಿದ್ದು, ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ದೀಪಾಲಂಕರಕ್ಕೆ ಅವಕಾಶ ನೀಡಲಾಗಿದೆ.

ಇನ್ನು ದೀಪಾಲಂಕಾರ ವೀಕ್ಷಣೆ ಮಾಡಲು ಕೋವಿಡ್ ನಿಯಮಗಳು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸುವುದು  ಕಡ್ಡಾಯ ಗೊಳಿಸಲಾಗಿದೆ. ಈ ನಿಯಮ ಪಾಲಿಸಲು ಸೂಚನೆ ನೀಡಲಾಗಿದೆ.

Key words: mysore dasara-2020- Electric lighting- decoration -only 10 days.