ಮೈಸೂರು ಅರಮನೆಗೆ ತಾಯಿ ಚಾಮುಂಡೇಶ್ವರಿ ವಿಗ್ರಹ ಆಗಮನ….

ಮೈಸೂರು,ಅಕ್ಟೋಬರ್,26,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಚಾಮುಂಡಿಬೆಟ್ಟದಿಂದ ಅಂಬವಿಲಾಸ ಅರಮನೆಗೆ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನ ತರಲಾಗಿದೆ.jk-logo-justkannada-logo

ಜಯಮಾರ್ತಾಂಡ ದ್ವಾರದ ಮ‌ೂಲಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಅರಮನೆಗೆ ತಾಯಿ ಚಾಮುಂಡೇಶ್ವರಿ ವಿಗ್ರಹ ಪ್ರವೇಶಿಸಿದ್ದು, ತಾಯಿ ಚಾಮುಂಡೇಶ್ವರಿ ಇಂದು ಜಂಬೂ ಸವಾರಿಯಲ್ಲಿ  ಕ್ಯಾಪ್ಟನ್ ಅಭಿಮನ್ಯು ಹೊರಲಿರುವ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಕಂಗೊಳಿಸಲಿದ್ದಾಳೆ. ತಾಯಿ ಚಾಮುಂಡೇಶ್ವರಿ ವಿಗ್ರಹಮೂರ್ತಿ ತರುವ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ನಿಂತು ಕಣ್ತುಂಬಿಕೊಂಡರು.mysore-dasara-2020-arrival-mother-chamundeshwari-mysore-palace

ತೆರದ ವಾಹನದಲ್ಲಿ ವಿಗ್ರಹ ರವಾನೆ ಮಾಡಲಾಗಿದ್ದು, ಅರಮನೆಯಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತದೆ.

Key words: mysore dasara-2020- arrival – mother Chamundeshwari – Mysore Palace