Sunday, August 23, 2026

BDA Apartments

Home DASARA2024 ವಿಪಕ್ಷ ನಾಯಕರನ್ನ “ ಮೂರ್ಖರು”  ಎಂದು ಜರಿದ ಸಿಎಂ ಸಿದ್ದರಾಮಯ್ಯ.

ವಿಪಕ್ಷ ನಾಯಕರನ್ನ “ ಮೂರ್ಖರು”  ಎಂದು ಜರಿದ ಸಿಎಂ ಸಿದ್ದರಾಮಯ್ಯ.

Mysore Dasara CM Siddaramaiah palace jamboosavari

 

ಮೈಸೂರು, ಅ.12,2024: (www.justkannada.in news) “ ಮೂರ್ಖರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ” ಈ ಬಾರಿ ದಸರಾ ಜಂಬೂಸವಾರಿಯಲ್ಲಿ ನಾನು ಪುಷ್ಪಾರ್ಚನೆ ಮಾಡುವುದಿಲ್ಲ ಎನ್ನುವವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು.

ಮೈಸೂರು ದಸರಾ ಜಂಬೂಸವಾರಿ ನಂದಿಧ್ವಜ ಪೂಜೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಮಾಧ್ಯಮದವರು ಮಾತನಾಡಿಸಿದರು.

ಇದು ದುಷ್ಟ ಸಂಹಾರ ಶಿಷ್ಟ ರಕ್ಷಣೆ ಮಾಡುವಂತ ಹಬ್ಬ. ಈ ಬಾರಿ ಉತ್ತಮ ಮಳೆ ಬೆಳೆಯಾಗಿದೆ ಸಮೃದ್ಧ ಮಳೆ ಕಾರಣ ಅಣೆಕಟ್ಟು ತುಂಬಿವೆ. ಈ ಸಂತಸದಲ್ಲಿ ನಾಡ ಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರರಿಸಲಾಗಿದೆ. ಈ ಅದ್ದೂರಿತನ ಎಲ್ಲರಿಗೂ ಸಂತದ ತಂದಿದೆ ಅಲ್ಲವೇ.? ಎಂದು ಮರು ಪ್ರಶ್ನಿಸಿದರು.

ವಿಜಯನಗರ ಸಾಮ್ರಾಜ್ಯದಲ್ಲಿ ಆರಂಭವಾದ ದಸರಾ ಮೈದಾನದಲ್ಲಿ ರಾಜ ಒಡೆಯರಿಂದ ಆರಂಭವಾಯಿತು. ಚಾಮುಂಡಿ ಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಲಾಯಿತು. ಈಗ ಸಂತೋಷದಿಂದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುತ್ತಿದ್ದೇನೆ.  ನಂದಿ ಧ್ವಜಕ್ಕೆ ಪುಷ್ಪಾರ್ಚನೆ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ.

key words: Mysore, Dasara, CM Siddaramaiah, palace, jamboosavari