ಜಂಬೂಸವಾರಿಗೆ ಕ್ಷಣಗಣನೆ : ಸಿಎಂ ಸಿದ್ದರಾಮಯ್ಯಗೆ ೮ ನೇ ಬಾರಿ , ಅಭಿಮನ್ಯುವಿಗೆ ೬ ನೇ ಬಾರಿ

The countdown to the world-famous Mysore Dasara Jambusavari has begun. The city of jasmine is all set for the historic Jambusavari in the palace courtyard tomorrow. Hundreds of people are standing on tiptoe to catch a glimpse of the royal mother Chamundeshwari in the 750 kg golden chariot carried by Captain Abhimanyu of the Gajapade.

 

ಮೈಸೂರು, ಅ.೦೧,೨೦೨೫: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಅರಮನೆ ಅಂಗಳದಲ್ಲಿ ಐತಿಹಾಸಿಕ ಜಂಬೂಸವಾರಿಗೆ ಮಲ್ಲಿಗೆ ನಗರಿ ಸಜ್ಜಾಗಿದೆ. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಹೊತ್ತು ಸಾಗುವ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗೋ ತಾಯಿ ಚಾಮುಂಡೇಶ್ವರಿಯನ್ನ ಕಣ್ತುಂಬಿಕೊಳ್ಳಲು ಕ್ಯೋಟ್ಯಾಂತರ ಜನ ತುದಿಗಾಲಿನಲ್ಲಿ ನಿಂತಿದ್ದಾರೆ.

ನಾಳೆ ಮಧ್ಯಾಹ್ನ 1 ಗಂಟೆ 1 ನಿಮಿಷದಿಂದ ರಿಂದ 1 ಗಂಟೆ 16 ನಿಮಿಷಕ್ಕೆ  ಸಲ್ಲುವ  ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಬಳಿಕ ಸಂಜೆ 4.42 ಗಂಟೆಯಿಂದ 5.16ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಕ್ಯಾಪ್ಟನ್ ಅಭಿಮನ್ಯು ಆರನೆ ಬಾರಿಗೆ ಜಂಬೂಸವಾರಿ ಹೊತ್ತು ಬನ್ನಿಮಂಟಕ್ಕೆ ಹೊರಡಲು ಸಜ್ಜಾಗಿ ನಿಂತಿದ್ದಾನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶರು ,ಸೇರಿದಂತೆ ಗಣ್ಯರು ನಾಡದೇವಿ ಚಾಮುಂಡಿಗೆ ಪುಷ್ಪಾರ್ಚನೆ ಮಾಡುವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ತವರಿನಲ್ಲಿ ಎಂಟನೇ ಬಾರಿಗೆ ದಸರಾ ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ  ಅತಿ ಹೆಚ್ಚು ಬಾರಿ ಭಾಗಿಯಾದ ಕೀರ್ತಿಗೂ ಭಾಜನರಾಗಿದ್ದಾರೆ.

ಅಭಿಮನ್ಯು ಅರನೇ ಬಾರಿ:

ಆರನೆ ಬಾರಿಗೆ ಅಂಬಾರಿ ಹೊತ್ತು ಸಾಗೋ ಕ್ಯಾಪ್ಟನ್ ಅಭಿಮನ್ಯುಗೆ ಕಾವೇರಿ ಹಾಗು ರೂಪ ಕುಮ್ಕಿ ಆನೆಗಳಾಗಿ ಸಾಥ್ ನೀಡಿದ್ರೆ, ಧನಂಜಯ ನಿಶಾನೆ ಆನೆಯಾಗಲಿದ್ದಾನೆ. ಗೋಪಿ ನೌಪತ್ ಆನೆಯಾಗಲಿದ್ದು,  14 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಲಿವೆ.

ಮೊದಲಿಗೆ ನಂದಿ ಧ್ವಜ ಉದ್ಘಾಟನೆ ಬಳಿಕ 57 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ರಾಜ್ಯದ 31 ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಸಾಗಲಿವೆ.

ಇದಲ್ಲದೆ ಮೈಸೂರಿನಲ್ಲಿ ಖಾಕಿ ಕಣ್ಗಾವಲು ಜಂಬೂ ಸವಾರಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ.

2 ಡಿಐಜಿ, 27 ಎಸ್‌ಪಿ, 989 ಡಿವೈಎಸ್ಪಿ, ಎಸಿಪಿ, ಇನ್ಸ್‌ಪೆಕ್ಟರ್ ಇತರೆ ಅಧಿಕಾರಿಗಳು ಮತ್ತು  ಸಿಬ್ಬಂದಿ ಸೇರಿ ಒಟ್ಟು 4999 ಸಿಬ್ಬಂದಿ, 1500 ಹೋಂ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಜತೆಗೆ 10 ಸಿಎಆರ್, 33 ಕೆಎಸ್‌ಆರ್‌ಪಿ, 29 ಎಎಸ್‌ಸಿ, 3 ಬಿಡಿಡಿಎಸ್, 1 ಗರುಡಾ ಪಡೆ, 1 ಐಎಸ್‌ಡಿ, ಸಿಐಇಡಿ ತುಕಡಿ ನಿಯೋಜಿಸಲಾಗುತ್ತಿದೆ. ಜತೆಗೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ 150 ಸಿಸಿ ಟಿವಿ ಅಳವಡಿಸಲಾಗಿದೆ.  ಅರಮನೆಗೆ ಪ್ರವೇಶ ಮಾಡುವ ದ್ವಾರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು. ಗಣ್ಯರು, ಸಾರ್ವಜನಿಕರು ಪ್ರವೇಶಿಸುವ ಕಡೆ ತಪಾಸಣೆ ಮಾಡಲಾಗುತ್ತದೆ.

ಇನ್ನೂ, ಅರಮನೆ ಅಂಗಳದಲ್ಲಿ ಗಣ್ಯರು ಸಾರ್ವಜನಿಕರಿಗೆ 30 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಬಾರಿ 40 ಸಾವಿರ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ 15 ಸಾವಿರ ಚೇರ್ ವ್ಯವಸ್ಥೆ ಕಡಿತಗೊಳಿಸಲಾಗಿದೆ. ಆ ಮೂಲಕ ನಾಳೆ ನಡೆಯೋ ಜಂಬೂಸವಾರಿ ಮೆರವಣಿಗೆಗೆ ಅರಮನೆಯ ಅಂಗಳದಲ್ಲಿ ಸಕಲ ರೀತಿಯಲ್ಲೂ ಸಿದ್ಧತೆ ಪೂರ್ಣಗೊಂಡಿದೆ‌‌.

key words:

Countdown to Jambu Savari, CM Siddaramaiah, Abhimanyu, Mysore, Dasara

vtu

SUMMARY:

Countdown to Jambu Savari: CM Siddaramaiah’s 8th time, Abhimanyu’s 6th time

The countdown to the world-famous Mysore Dasara Jambusavari has begun. The city of jasmine is all set for the historic Jambusavari in the palace courtyard tomorrow. Hundreds of people are standing on tiptoe to catch a glimpse of the royal mother Chamundeshwari in the 750 kg golden chariot carried by Captain Abhimanyu of the Gajapade.