Wednesday, August 19, 2026

BDA Apartments

Home Front Page 17 ಬಾರಿ ಬಜೆಟ್ ಮಂಡಿಸಿದ ಸಿಎಂಗೆ ಈಗ ಪ್ರವಾಸ ಬೇಕಾ? ಮಾಜಿ ಶಾಸಕ ಸಾ.ರಾ ಮಹೇಶ್...

17 ಬಾರಿ ಬಜೆಟ್ ಮಂಡಿಸಿದ ಸಿಎಂಗೆ ಈಗ ಪ್ರವಾಸ ಬೇಕಾ? ಮಾಜಿ ಶಾಸಕ ಸಾ.ರಾ ಮಹೇಶ್ ಕಿಡಿ

ಮೈಸೂರು,ಫೆಬ್ರವರಿ,16,2026 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾಗುತ್ತಿರುವ ವೇಳೆಯೇ ಕಾಂಗ್ರೆಸ್ ಕೆಲ ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಬಣದ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆಂಬ ಸುದ್ದಿಯಾಗುತ್ತಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸಾ.ರಾ ಮಹೇಶ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಾ.ರಾ ಮಹೇಶ್,   17 ಬಾರಿ ಬಜೆಟ್ ಮಂಡುತ್ತಿರುವ ಸಿಎಂ ಸಿದ್ದರಾಮಯ್ಯರಿಗೆ ಈಗ ಪ್ರವಾಸ ಬೇಕಾ?  ಪ್ರವಾಸ ಸಮಾಧಾನ ಮಾಡುವುದಕ್ಕೋ ಏನೋ ಗೊತ್ತಗಿಲ್ಲ ಎಂದು ಲೇವಡಿ ಮಾಡಿದರು.

ಜನರು ಬಹಳ ಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಪ್ರವಾಸ ಬೇಕಿತ್ತಾ. ಜನರಿಗೆ ಮನೆಯನ್ನಾದರೂ ಕೊಡಿ. ಮುಖ್ಯಮಂತ್ರಿಗಳೆ ನಿಮ್ಮ ಜಿಲ್ಲೆಯಲ್ಲಾದರೂ ಒಂದು ಮನೆ ಕೊಡಿ. ಅಧ್ಯಯನ ಮಾಡುವುದಾದರೆ ಕೆಲವರನ್ನ ಮಾತ್ರ ಪ್ರವಾಸಕ್ಕೆ ಕಳುಹಿಸುತ್ತಿದ್ದರು.  ಈ ರೀತಿ ಸಾಮೂಹಿಕವಾಗಿ ಹೋಗುತ್ತಿರಲಿಲ್ಲ ಎಂದು  ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದರು.

Key words: CM, MLAs, Foreign trip,Former MLA, Sa.Ra. Mahesh