ಮೈಸೂರು, SEP.23,2025: ಮೈಸೂರು ದಸರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳಿಗೆ ಈ ಬಾರಿ ಜಿಲ್ಲಾಡಳಿತ ಟಿಕೆಟ್ ಹಾಗೂ ‘ಪಾಸ್ ವ್ಯವಸ್ಥೆ’ ಮಾಡಿದೆ. ಟಿಕೆಟ್ ಏನೋ ದಸರಾ ವೆಬ್ ಸೈಟ್ ನಲ್ಲಿ ಆನ್ ಲೈನ್ ನಲ್ಲಿ ಸಿಗುತ್ತದೆ ಎಂಬ ಮಾಹಿತಿ ಇದೆ. ಆದರೆ ಈ ಪಾಸ್..? ಎಲ್ಲಿ ಸಿಗುತ್ತದೆ. ಯಾರ ಕೊಡುತ್ತಾರೆ..? ಎಂಬುದೇ ಇನ್ನು ಚಿದಂಬರಂ ರಹಸ್ಯ.
ಪ್ರಭಾವಿಗಳಿಗೆ ಮಾತ್ರವೇ ಪಾಸ್ ಲಭಿಸುವ ಕಾರಣ, ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶ ಉಳ್ಳವರಿಗೆ ಮಾತ್ರ ಸಿಗಲಿದೆ. ಇದರಿಂದ ಪರ ಸ್ಥಳಗಳಿಂದ ದಸರಾ ವೀಕ್ಷಣೆಗೆ ಬರಲಿರುವ ಸಾವಿರಾರು ಮಂದಿಗೆ ತೊಡಕಾಗಿದೆ.
ಇಂದಷ್ಟೆ ಜಿಲ್ಲಾಡಳಿತ, ಮಾಧ್ಯಮದ ವಾಟ್ಸ್ ಅಪ್ ಗುಂಪಿನಲ್ಲಿ ಪ್ರಕಟಣೆಯೊಂದನ್ನು ಹಾಕಿದೆ. ಅದು ದಸರಾ ವೈಮಾನಿಕ ಪ್ರದರ್ಶನಕ್ಕೆ ಸಂಬಂಧಿಸಿದ್ದು. ಸೆ. ೨೫ ರಂದು ಸಂಜೆ ೪ ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ವೈಮಾನಿಕ ಪ್ರದರ್ಶನದ ಪೂರ್ವಭ್ಯಾಸ ಇರಲಿದೆ ಎಂಬ ಮಾಹಿತಿ ನೀಡಲಾಗಿದೆ. ಜತೆಗೆ ಈ ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಸನದ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಪಾಸುಗಳನ್ನು ನೀಡಲಾಗುವುದು. ಪಾಸ್ ಇದ್ದವರಿಗೆ ಮಾತ್ರ ಬನ್ನಿಮಂಟಪ ಮೈದಾನಕ್ಕೆ ಪ್ರವೇಶ ಎಂಬ ಉಲ್ಲೇಖವಿದೆ.
ಆದರೆ ವಿಪರ್ಯಾಸವೆಂದರೆ, ಈ ಪಾಸ್ ಎಲ್ಲಿದೆ..? ಇದನ್ನು ವಿತರಿಸುವವರು ಯಾರು..? ಪಾಸ್ ಪಡೆಯಬೇಕಾದರೆ ಏನು ಮಾಡಬೇಕು ಎಂಬ ಯಾವುದೇ ಮಾಹಿತಿಯೂ ಯಾರ ಬಳಿಯೂ ಇಲ್ಲ. ಈ ಬಗ್ಗೆ ಸಂಬಂಧಿಸಿದವರನ್ನು ಪ್ರಶ್ನಿಸಿದರು ಅವರು ಸಹ ನಿರುತ್ತರ.
ಉದ್ಘಾಟನೆಗೂ ಪಾಸ್ :
ನಾಡಹಬ್ಬ ಸೆ.22ರಿಂದ ಅ.2ರವರೆಗೆ ನಡೆಯಲಿದೆ. ಚಾಮುಂಡಿಬೆಟ್ಟದಲ್ಲಿ ಉದ್ಘಾಟನಾ ಸಮಾರಂಭಕ್ಕೂ ಸಹ ಇದೇ ಮೊದಲ ಬಾರಿಗೆ ಪಾಸ್ ಕಡ್ಡಾಯಗೊಳಿಸಲಾಗಿತ್ತು. ಆದರೆ, ಪಾಸ್ ಅನ್ನು ಎಲ್ಲಿ, ಯಾರು ಕೊಟ್ಟರು, ಇದರ ಮಾನದಂಡವೇನು, ಒಬ್ಬರಿಗೆ ಎಷ್ಟು ಪಾಸ್ ವಿತರಿಸಲಾಯಿತು ಎಂಬ ಬಗ್ಗೆ ಜಿಲ್ಲಾಡಳಿತ ಈವರೆಗೂ ಮಾಹಿತಿ ನೀಡಿಲ್ಲ.
ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣದಲ್ಲಿ ವೀಕ್ಷಿಸಲು ಹಿಂದಿನಿಂದಲೂ ಟಿಕೆಟ್ ಹಾಗೂ ಪಾಸ್ ವ್ಯವಸ್ಥೆ ಜಾರಿಯಲ್ಲಿದೆ. ಗೋಲ್ಡ್ ಕಾರ್ಡ್, ಜಂಬೂಸವಾರಿ ಟಿಕೆಟ್ ಅಥವಾ ಪಾಸ್ ಇದ್ದವರಿಗಷ್ಟೆ ಅವಕಾಶ.
ಆದರೆ, ಇದೇ ಪ್ರಥಮ ಬಾರಿಗೆ ದಸರಾ ಮಹೋತ್ಸವದ ಇತರ ಹಲವು ಕಾರ್ಯಕ್ರಮಗಳಿಗೂ ಪಾಸ್ ಕಡ್ಡಾಯಗೊಳಿಸಲಾಗಿದೆ. ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಅಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ. ಆದರೆ, ಪಾಸ್ಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ.
key words: Mysore Dasara, pass, confusion
SUMMARY:
This time, the district administration has made a ticket and ‘pass arrangement’ for the important programs of the Mysore Dasara. There is information that tickets are available online on the Dasara website. But this pass? Where is it available? Who gives it..? That is still a mystery.