ನಷ್ಟದಲ್ಲಿರುವ ಜಿಮ್ ಗಳಿಗೆ ಪರಿಹಾರ ನೀಡುವಂತೆ ಒತ್ತಾಯ: ಕೊರೋನಾ ಪರಿಸ್ಥಿತಿ ನಿರ್ವಹಣೆ ಕುರಿತು ಸರ್ಕಾರದ ವಿರುದ್ದ ಕಿಡಿಕಾರಿದ ವಾಟಾಳ್  ನಾಗರಾಜ್

ಮೈಸೂರು,ಜು,30,2020(www.justkannada.in):   ಕೊರೋನಾ ಲಾಕ್ ಡೌನ್ ನಿಂದಾಗಿ ನಷ್ಟದಲ್ಲಿರುವ ಜಿಮ್ ಗಳಿಗೆ ಪರಿಹಾರ ನೀಡುವಂತೆ ಮೈಸೂರಿನಲ್ಲಿ ಜಿಮ್ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.jk-logo-justkannada-logo

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಾರ್ಡಿಂಜ್ ವೃತ್ತದಲ್ಲಿ ಸೇರಿ ಜಿಮ್ ಮಾಲೀಕರು  ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ 5 ತಿಂಗಳಿಂದ ಜಿಮ್ ಬಂದ್ ಆಗಿದೆ. ಕಳೆದ 5 ತಿಂಗಳಿಂದ ಆಗಿದ್ದ ನಷ್ಟಕ್ಕೆ ಪರಿಹಾರ ಧನ ನೀಡುವಂತೆ ಜಿಮ್ ಮಾಲೀಕರು  ಮನವಿ ಮಾಡಿದರು.

ಹಾಗೆಯೇ ಜಿಮ್ ತೆರೆಯಲು ಅನುಮತಿ ನೀಡಿರುವ ಹಿನ್ನೆಲೆ ಸರ್ಕಾರದ ಆದೇಶದಂತೆ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡೆ ಜಿಮ್ ಪ್ರಾರಂಭ ಮಾಡುತ್ತೇವೆ ಎಂದು ಜಿಮ್ ಮಾಲೀಕರು ತಿಳಿಸಿದರು.

ಈ ವೇಳೆ ಮಾತನಾಡಿ  ಕೊರೋನಾ ಪರಿಸ್ಥಿತಿ ನಿರ್ವಹಣೆ ಕುರಿತು ಸರ್ಕಾರದ ವಿರುದ್ದ ಕಿಡಿಕಾರಿದ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಮಂತ್ರಿಗಳಿಗೆ ಬುದ್ಧಿಯಿಲ್ಲ, ಮಂತ್ರಿಗಳಲ್ಲೆ ಸಮನ್ವಯದ ಕೊರತೆ ಇದೆ. ಯಡಿಯೂರಪ್ಪನವರ ಮಾತನ್ನು ಯಾರೂ ಕೇಳುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿರಗಳ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗುತ್ತಿದೆ. ಇನ್ನಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳಬೇಕೆಂದರು.

ಟಿಪ್ಪುವಿನ ವಿಷಯ ಪಠ್ಯದಿಂದ ತೆಗೆದ್ರೆ ರಾಜ್ಯದಲ್ಲಿ ಕ್ರಾಂತಿ…

ಟಿಪ್ಪುವಿನ ವಿಷಯವನ್ನು ಪಠ್ಯದಿಂದ ತೆಗೆದುಹಾಕಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಟಿಪ್ಪು ಓರ್ವ ಹೋರಾಟಗಾರ. ಟಿಪ್ಪು ತನ್ನ ಇಬ್ಬರು ಮಕ್ಕಳನ್ನೇ ಒತ್ತೆಯಾಗಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿದವನು. ಟಿಪ್ಪುವಿನ ವಿಷಯವನ್ನು ಪಠ್ಯದಿಂದ ಯಾವುದೇ ಕಾರಣಕ್ಕೂ ತೆಗೆಯಬಾರದು. ಒಂದು ವೇಳೆ ತೆಗೆದೆರೆ ರಾಜ್ಯದಲ್ಲಿ ಕ್ರಾಂತಿಯೇ ಆಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. mysore-compensation-loss-gyms-vatal-nagaraj

ಆನ್ ಲೈನ್ ಶಿಕ್ಷಣ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗಾರಾಜ್,  ಸರ್ಕಾರ ಯಾವುದೇ ಕಾರಣಕ್ಕೂ ಆನ್‌ಲೈನ್ ಶಿಕ್ಷಣ ಜಾರಿಗೆ ತರಬಾರದು. ಆನ್‌ಲೈನ್ ಶಿಕ್ಷಣಕ್ಕೆ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್ ಗಳ ಅವಶ್ಯಕತೆಯಿದೆ. ಅದನ್ನು ತೆಗೆದುಕೊಳ್ಳುವುದಕ್ಕೆ 50 ಸಾವಿರಗಳಾದರೂ ಹಣ ಬೇಕು. ಅಷ್ಟು ಹಣವನ್ನು ಬಡವರು ತರುವುದಾದರೂ ಹೇಗೆ ಎಂದು ಆನ್‌ಲೈನ್ ಶಿಕ್ಷಣ ಕುರಿತು ಸರ್ಕಾರದ ನಿರ್ಧಾರ ಪ್ರಶ್ನಿಸಿದರು.

Key words: mysore- compensation -loss – gyms-Vatal Nagaraj