ಒಕ್ಕಲಿಗರ ಮೀಸಲಾತಿ  ಆಗ್ರಹ ವಿಚಾರ: ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ- ಸಿಎಂ ಬೊಮ್ಮಾಯಿ.

ಮೈಸೂರು,ನವೆಂಬರ್,28,2022(www.justkannada.in): ಒಕ್ಕಲಿಗರ ಮೀಸಲಾತಿ  ಆಗ್ರಹ ವಿಚಾರ ಸಂಬಂಧ, ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅವರ ಲೆಟರ್ ನನ್ನ ಕೈ ಸೇರಲಿ. ನಾನು ಮುಂದೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನನಗೆ ರಾಜಕೀಯ ಒತ್ತಡ ಇರುವುದು ಸತ್ಯ. ‌ ನಾನು ಎಲ್ಲಾ ಪಕ್ಷಗಳ ಹಿತ ಕಾಯಬೇಕಿದೆ. ಆ ಕಾರಣಕ್ಕೆ ನಾನು ಎಲ್ಲಾ ರೀತಿಯ ಆಲೋಚನೆ ಮಾಡಬೇಕಾಗುತ್ತದೆ ಎಂದರು.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರದ ತಯಾರಿ ನಡೆಸುತ್ತಿದೆ. ನನ್ನೊಂದಿಗೆ ಕೇಂದ್ರದಿಂದ ಯಾರೂ ಸಮಾಲೋಚನೆ ಮಾಡಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕೆಂದು ನಮ್ಮ ಪಕ್ಷದ 30 ವರ್ಷಗಳ ನಿಲುವು. ಈ ಬಗ್ಗೆ ನಾನು ಸಹ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕುತ್ತಿದ್ದೇನೆ. ಈ ಬಗ್ಗೆ ಮುಂದಿನ‌ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ನ.30 ರಂದು ಮಹಾರಾಷ್ಟ್ರ ಗಡಿ ವಿಚಾರ ತೀರ್ಪು ಹಿನ್ನಲೆ  ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಂಜೆ ದೆಹಲಿ ಪ್ರಯಾಣ ಬೆಳೆಸಲಿದ್ದು ಈ ಕುರಿತು ಪ್ರತಿಕ್ರಿಯಿಸಿದ ಅವರು, ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಪೂರ್ವ ಚರ್ಚೆಯನ್ನ ನಡೆಸುತ್ತೇನೆ. ಅದರ ಜೊತೆಗೆ ಬೇರೆ ಬೇರೆ ವಿಚಾರಗಳು ಚರ್ಚೆಯಾಗಯತ್ತೆ ಎಂದರು.

Key words: mysore-CM-Basavaraj bommai- Reservation -vokkaliga

ENGLISH SUMMRY…

Reservation for Vokkaligas: I am not of aware of the deadline – CM Bommai
Mysuru, November 28, 2022 (www.justkannada.in): In his reply to the issue of giving a deadline by the Vokkaligas on giving reservations to their community, Chief Minister Basavaraj Bommai today said that he was not aware of it. “I will arrive at a decision after I receive the letter,” he said.
Speaking in Mysuru today, the Chief Minister said, “It is true that I am facing political pressure. I have to protect the interests of all the communities. Hence, I have to think in all the directions.”
“The Govt. of India is making preparations are being made to implement the Uniform Civil Code. However, no one from the Centre have consulted me till now. It is our party’s intention from the last 30 years to implement Uniform Civil Code. I have also collected all the information concerning this. We will take a suitable decision on this in the coming days,” he observed.
Chief Minister Bommai will leave to Delhi on November 30 evening to discuss about the Maharashtra-Karnataka border dispute. In his response to this he informed that he will have discussions on the pros and cons of the dispute, apart from various other issues.
Keywords: Chief Minister/ Basavaraj Bommai/ Uniform Civil Code/ Reservation/ Vokkaligas