ಲಾಕ್ ಡೌನ್ ಸದುಪಯೋಗಕ್ಕೆ ಮೈಸೂರು ನಗರ ಪಾಲಿಕೆ ಮಾಸ್ಟರ್ ಪ್ಲಾನ್ !

ಮೈಸೂರು, ಜುಲೈ 05, 2020 (www.justkannada.in): ಲಾಕ್ ಡೌನ್ ಸದುಪಯೋಗ ಮೈಸೂರು ನಗರ ಪಾಲಿಕೆ ಮುಂದಾಗಿದೆ.

ಹೌದು. ಮೈಸೂರು ನಗರ ಪಾಲಿಕೆಯ ಸಖತ್ ಪ್ಲಾನ್ ಮಾಡಿದೆ. ಲಾಕ್ ಡೌನ್ ಸಂದರ್ಭವನ್ನು ಉಪಯೋಗಿಸಿಕೊಂಡು ರಸ್ತೆಯ ಅಕ್ಕಪಕ್ಕ ಮರದ ಅನವಶ್ಯಕ ರೆಂಬೆ ಕೊಂಬೆಗಳ ತೆರವು ಮಾಡಲು ಕ್ರಮ ವಹಿಸಿದೆ.

ಸಯ್ಯಾಜಿರಾವ್ ರಸ್ತೆಯ ಇಕ್ಕೆಲಗಳ ಮರಗಳ ರೆಂಬೆ ಕೊಂಬೆ ತೆರವು ಮಾಡುತ್ತಿರುವ ಪಾಲಿಕೆ ಸಿಬ್ಬಂದಿ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ದಿನ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿರುವ ಹಿನ್ನೆಲೆ ಇಂದು ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧವಿರುವ ಹಿನ್ನೆಲೆಯಲ್ಲಿ ಮರಗಳ ಕೊಂಬೆ ತೆರವಿಗೆ ಪಾಲಿಕೆ ಮುಂದಾಗಿದೆ.