ಏಳು ವರ್ಷದ ಪೋರನಿಂದ ಆಟೋಗ್ರಾಫ್ ಪಡೆದ ಕೊಯ್ಲಿ !

ಜಮೈಕಾ, ಸೆಪ್ಟೆಂಬರ್ 04, 2019 (www.justkannada.in): ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ 7 ವರ್ಷದ ಬಾಲಕನಿಂದ ಆಟೋಗ್ರಾಫ್ ಪಡೆದಿದ್ದಾರೆ!

ಬಾಲಕನ್ನು ಕಂಡು ಇಲ್ಲೇ ನಿಲ್ಲಿ, ನಾನು ಆತನ (ಬಾಲಕನ) ಆಟೋಗ್ರಾಫ್ ಪಡೆದು ಬರುತ್ತೇನೆ ಎಂದು ಅನುಷ್ಕಾಗೆ ಹೇಳಿ ಬಾಲಕನಿದ್ದಲ್ಲಿಗೆ ಹೋಗಿ ಆಟೋಗ್ರಾಫ್ ಪಡೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಮೈಕಾದಲ್ಲಿರುವ ಅಮಿತ್ ಲಖಾನಿ ಎಂಬವರು, ನನ್ನ ಸಂಬಂಧಿ ಏಳು ವರ್ಷದ ಬಾಲಕನ ಆಟೋಗ್ರಾಫ್ ಅನ್ನು ವಿರಾಟ್ ಕೊಹ್ಲಿ ಪಡೆದರು. ಇದು ನಮಗೆ ಹೆಮ್ಮೆಯ ವಿಷಯ ಮತ್ತು ಅವಿಸ್ಮರಣೀಯ ಎಂದು ಬಣ್ಣಿಸಿದ್ದಾರೆ.