ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ. 36ರ ಉಪ ಚುನಾವಣೆ: ಸದ್ಯ ಕೇವಲ ಒಂದೇ ನಾಮಪತ್ರ ಸಲ್ಲಿಕೆ

kannada t-shirts

ಮೈಸೂರು, ಆಗಸ್ಟ್ 22, 2021 (www.justkannada.in): ಮೈಸೂರು ಮಹಾನಗರಪಾಲಿಕೆ ವಾರ್ಡ್ ನಂ 36ರ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಆಸಕ್ತಿ ತೋರುತ್ತಿಲ್ಲ.

ಇಲ್ಲಿಯವರೆಗೆ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಸಲು ಒಂದೇ ದಿನ ಮಾತ್ರ ಬಾಕಿ ಇದ್ದು, ಇಂದು ಭಾನುವಾರ ರಜೆ ಹಿನ್ನೆಲೆ ಉಳಿದಿರುವುದು ಒಂದೇ ದಿನ. 16ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಗಿದೆ.

ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಇಲ್ಲಿವರೆಗೆ ಕೆಲವೇ ಒಂದೇ ನಾಮಪತ್ರ ಸಲ್ಲಿಕೆಯಾಗಿದೆ.

ರೂಪ ಎಂಬುವವರುಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಒಂದೆಡೆ ಜೆಡಿಎಸ್ , ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಇನ್ನೂ ಚುನಾವಣಾ ಕಚೇರಿಯತ್ತ ಮುಖ‌ ಮಾಡಿಲ್ಲ. ಇಂದು ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ.

ಪ್ರಮುಖ ಪಕ್ಷದ ಅಭ್ಯರ್ಥಿಗಳು ಕೊನೆಯ‌ ದಿನ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಜೆಡಿಎಸ್ , ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಕೈಗೊಂಡಿದ್ದಾರೆ. ವಾರ್ಡ್ ನಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ.

website developers in mysore