ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ರದ್ದು: ಕಾಂಗ್ರೆಸ್ ನಿಂದ ದಿಢೀರ್ ಪ್ರತಿಭಟನೆ.

ಮೈಸೂರು,ಫೆಬ್ರವರಿ,3,2023(www.justkannada.in): ಮೈಸೂರು ಮಹಾನಗರ ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ಚುನಾವಣಾ ಗೊಂದಲ ಮುಂದುವರೆದಿದ್ದು, ಮೇಯರ್ ಗೆ ಅನಾರೋಗ್ಯ ಎಂಬ ಕಾರಣದಡಿ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ರದ್ದುಪಡಿಸಿದ ಹಿನ್ನೆಲೆ ಕಾಂಗ್ರೆಸ್ ಸದಸ್ಯರು ಪಾಲಿಕೆ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.

ಮೇಯರ್ ಗೆ ಅನಾರೋಗ್ಯ ಎಂಬ ಕಾರಣದಡಿ ಪಾಲಿಕೆ ಕೌನ್ಸಿಲ್ ಸಭೆ ರದ್ದಾಗಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಗರ ಪಾಲಿಕೆ ಸದಸ್ಯರು ಹಾಗೂ  ನಗರ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ‌ ನಡೆಯಿತು.

ಈ ವೇಳೆ ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ನಾಯಕ ಅಯುಬ್ ಖಾನ್, ಸ್ಥಾಯಿ ಸಮಿತಿ ಚುನಾವಣೆ ರದ್ದು ಮಾಡುವ ಹುನ್ನಾರದಿಂದ ಕೌನ್ಸಿಲ್ ಸಭೆ ರದ್ದು ಮಾಡಿದ್ದಾರೆ. ಬಿಜೆಪಿ ಮೇಯರ್ ಅಧಿಕಾರಕ್ಕೆ ಬಂದಾಗಿನಿಂದ ಕಾನೂನನ್ನು ಗಾಳಿಗೆ ತೂರಲಾಗಿದೆ. ಮೇಯರ್ ಆದ 15 ದಿನದ ಒಳಗಾಗಿ ಸ್ಥಾಯಿ ಸಮಿತಿ ಚುನಾವಣೆ ನಡೆಸಬೇಕು. ಆದರೆ 6 ತಿಂಗಳು ಕಳದೆರೂ ಇಲ್ಲದ ಸಬೂಬು ಹೇಳಿ ಚುನಾವಣೆ ಮುಂದೂಡುತ್ತಿದ್ದಾರೆ. ನಾಳೆ ಕಾಂಗ್ರೆಸ್ ನಿಯೋಗದಿಂದ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡುತ್ತೇವೆ. ನ್ಯಾಯಕ್ಕಾಗಿ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ತಿಳಿಸಿದರು.

Key words: Mysore –city- Corporation- Council- meeting –cancelled-protest – Congress.