ಮೈಸೂರು ಮಹಾನಗರ ಪಾಲಿಕೆ ಬೈ ಎಲೆಕ್ಷನ್ : ಗೆಲುವಿನ ಸಂತಸ ಹಂಚಿಕೊಂಡ ‘ಕೈ’ ಅಭ್ಯರ್ಥಿ.

ಮೈಸೂರು,ಸೆಪ್ಟಂಬರ್,6,2021(www.justkannada.in): ಮೈಸೂರು ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಜಿನಿ ಅಣ್ಣಯ್ಯ ಗೆಲುವು ಸಾಧಿಸಿದ್ದು ಈ ಹಿನ್ನೆಲೆಯಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇದು ಸತ್ಯಕ್ಕೆ ಸಂದ ಜಯ. ಸತ್ಯಕ್ಕೆ ಯಾವತ್ತಿದ್ರೂ ಗೆಲವು ಸಿಗಲಿದೆ. ಮೂರು ವರ್ಷದ ಕಾನೂನು ಹೋರಾಟ ಮಾಡಿದ್ದೆ. ಸಾಕಷ್ಟು ಹೋರಾಟದಿಂದ ನಾನು ಗೆಲುವು ಸಾಧಿಸಿದ್ದೇನೆ. ಹೀಗಾಗಿ ಎಲ್ಲಾ ಮತದಾರಿಗೆ ಅಭಿನಂದನೆ ಸಲ್ಲಿಸುತ್ತೇ‌ನೆ. ಎಲ್ಲಾ ಕಾಂಗ್ರೆಸ್ ಮುಖಂಡರು , ನಾಯಕರು ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ರಜಿನಿ ಅಣ್ಣಯ್ಯ ಹೇಳಿದರು.

ಜಿಟಿ ದೇವೇಗೌಡರ ಕುಟಂಬ ನಮಗೆ ಸಂಬಂಧಿಕರು.  ಹಾಗಾಗಿ ಚುನಾವಣೆ ಸಂದರ್ಭದಲ್ಲಿ ಅವರ ಆಶೀರ್ವಾದ ಪಡೆದಿದ್ದೆ. ಅವರ ಆಶೀರ್ವಾದ ಇದೆ. ನಮ್ಮ ಡಿಸಿಸಿ ಸದಸ್ಯರು ಆಗಿದ್ದರಿಂದ ಹರೀಶ್ ಪೋಟೊ ಬಳಸಿದ್ದೆ. ಅವರ ಕುಟುಂಬದ ಸಹಾಯ ನನ್ನ ಗೆಲುವುಗೆ ಸಹಕಾರಿ ಆಗಿದೆ. ಅವರ‌ ಕುಟುಂಬಕ್ಕೆ ಚಿರರುಣಿಯಾಗಿರುತ್ತೇವೆ ಎಂದು ರಜಿನಿ ಅಣ್ಣಯ್ಯ ತಿಳಿಸಿದರು.

Key words: Mysore-city corporation-  by-election –victory-congress- candidate