ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಬಂಗಲೆ ಯಾಕೆ.? ಎಲ್.ಐ.ಜಿ. ಮನೆನೇ ಸಾಕು : ಶಾಸಕ ಸಾ.ರಾ.ಮಹೇಶ್

 

ಮೈಸೂರು, ಸೆ.06, 2021 : (www.justkannada.in news) ; ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಸರಕಾರಿ ಬಂಗಲೆಗಳನ್ನು ವಾಸಕ್ಕೆ ಕೊಡುವುದಕ್ಕೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮಹೇಶ್ ಹೇಳಿದಿಷ್ಟು….

ಮಂತ್ರಿಗಳನ್ನು, ಶಾಸಕರನ್ನು ನೋಡಲು ಕ್ಷೇತ್ರದ ಜನತೆ ಹಾಗೂ ಸಾರ್ವಜನಿಕರು ಬರುತ್ತಾರೆ. ಆದರೆ ಐಎಎಸ್ ಅಧಿಕಾರಿಗಳಿಗೆ 5 ಎಕರೆ 6 ಎಕರೆ ಬಂಗ್ಲೆ ಏಕೆ.?

ಮುಖ್ಯಮಂತ್ರಿಗಳು ಈ ಕೂಡಲೇ ಐಎಎಸ್ ಅಧಿಕಾರಿಗಳ ವಾಸಕ್ಕೆ ನೀಡಿರುವ 5 ಎಕರೆ 6 ಎಕರೆ ಬಂಗ್ಲೆಯನ್ನು ವಾಪಸ್ಸು ಪಡೆಯಬೇಕು. ಅದನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು. ಸರ್ಕಾರಿ ಕಚೇರಿಗೆ ಉಪಯೋಗಿಸಬೇಕು. ಶಾಸಕ ಸಾ ರಾ ಮಹೇಶ್ ಹೇಳಿಕೆ.

ಐಎಎಸ್ ಅಧಿಕಾರಿಗಳಿಗೆ ಎಲ್‌ಐ‌ಜಿ ಮನೆ ಕೊಟ್ಟಿದ್ದರೆ ಈಜುಕೊಳ ಎಲ್ಲಿ ಮಾಡುತ್ತಿದ್ದರು? ಅಷ್ಟೋಂದು ವಿದ್ಯುತ್ ಬಿಲ್ ಎಲ್ಲಿ ಬರುತಿತ್ತು. ನಿವೃತ್ತ ಅಧಿಕಾರಿಗಳ ಆಸ್ತಿ 500 ಕೋಟಿ , ಸಾವಿರ ಕೋಟಿ ಇದೆಯಲ್ಲಾ ಎಲ್ಲಿಂದ ಬಂತು. ಈ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇನೆ. ಸಾ.ರಾ.ಮಹೇಶ್ ಸವಾಲ್.

Fighting,Wife,bringing,children,Shame,ourselves,Legislator,Sa.ra.Mahesh

 

key words : bungalows- IAS -IPS officers- L.I.G. – Home -MLA- Mahesh

Why bungalows for IAS and IPS officers? L.I.G. Home is enough: MLA Mahesh