Monday, October 5, 2026

BDA Apartments

ವಿನೂತನ ಪ್ರಯತ್ನ: ಮೈಸೂರಿನಲ್ಲಿ ಪ್ರಸಾದದ ಬದಲು ಮಾಸ್ಕ್ ವಿತರಣೆ… BDA JK_Adv BDA Adv
Home Cinema ಇಂದು ಮೈಸೂರಿನಲ್ಲಿ ರ್ಯಾಪರ್ ಚಂದನ್ ಶೆಟ್ಟಿ – ಬಿಗ್ ಬಾಸ್ ಖ್ಯಾತಿಯ ನಿವೇದಿತಾಗೌಡ ಅವರ ನಿಶ್ಚಿತಾರ್ಥ….

ಇಂದು ಮೈಸೂರಿನಲ್ಲಿ ರ್ಯಾಪರ್ ಚಂದನ್ ಶೆಟ್ಟಿ – ಬಿಗ್ ಬಾಸ್ ಖ್ಯಾತಿಯ ನಿವೇದಿತಾಗೌಡ ಅವರ ನಿಶ್ಚಿತಾರ್ಥ….

ಮೈಸೂರು,ಅ,21,2019(www.justkannada.in): ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಪ್ರಪೋಸ್ ಮಾಡಿ ಟೀಕೆಗೆ ಗುರಿಯಾಗಿದ್ದ , ಕನ್ನಡ ರ್ಯಾಪರ್ ಚಂದನ್ ಶೆಟ್ಟಿ – ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರ ನಿಶ್ಚಿತಾರ್ಥ ಇಂದು ಮೈಸೂರಿನಲ್ಲಿ ನಡೆಯಲಿದೆ.

ನಗರದ ಖಾಸಗಿ ಹೋಟೆಲ್‌ ನಲ್ಲಿ ಬಿಗ್ಬಾಸ್ ಖ್ಯಾತಿಯ ನಿವೇದಿತಾಗೌಡ- ಕನ್ನಡ ರ್ಯಾಪರ್ ಚಂದನ್ ಶೆಟ್ಟಿ  ಎಂಗೇಜ್ ಮೆಂಟ್ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದ್ದು, ಹೋಟೆಲ್ ಗೆ ಎರಡು ಕುಟುಂಬದ ಸದಸ್ಯರು ಆಗಮಿಸಿದ್ದಾರೆ.

ನಿಶ್ಚಿತಾರ್ಥಕ್ಕೆ ರೆಡಿಯಾದ ಬೇಬಿ ಡಾಲ್ ನಿವೇದಿತಾ ಗೌಡ ರೆಡಿಯಾಗಿದ್ದು, ತಿಳಿ ಹಸಿರು ಬಣ್ಣದ ಸೀರೆಯುಟ್ಟು ಕಂಗೊಳಿಸುತ್ತಿದ್ದಾರೆ. ತಮ್ಮ ಎಂಗೇಜ್ ಮೆಂಟ್ ಬಗ್ಗೆ ಪ್ರತಿಕ್ರಿಯಿಸಿರುವ ನಿವೇದಿತಾ ಗೌಡ, ಎಂಗೇಜ್‌ಮೆಂಟ್ ಬಗ್ಗೆ ಖುಷಿ ಇದೆ. ನನಗೆ ನಿಶ್ಚಿತಾರ್ಥದ ಪ್ರಕ್ರಿಯೆಗಳೆಲ್ಲವೂ ಹೊಸದು.  ಚಂದನ್ ಯುವ ದಸರಾದಲ್ಲಿ ಪ್ರಮೋಸ್ ಮಾಡಿದ್ದರು.  ಆದ್ದರಿಂದ ಮನೆಯವರು ಇಂದು ಒಳ್ಳೆಯ ದಿನ ಎನ್ನುವ ಕಾರಣಕ್ಕೆ ಎಂಗೇಜ್‌ಮೆಂಟ್ ನಿಶ್ಚಯ ಮಾಡಿದ್ದಾರೆ. ಆತುರಾತುರವಾಗಿ ನಿಶ್ಚಿತಾರ್ಥ ಆಗುತ್ತಿದೆ ಎನ್ನುಸುತ್ತಿಲ್ಲ ಎಂದು ತಿಳಿಸಿದರು.

Key words: ‌ mysore-Chandan Shetty – Bigg Boss –niveditha gowda- engagement -today