ಚಾಮುಂಡಿಬೆಟ್ಟದ ನಂದಿಗೆ ಮಹಾಮಜ್ಜನ.

 

ಮೈಸೂರು, ನ.21, 2021 : (www.justkannada.in news ) ಇಲ್ಲಿನ ಚಾಮುಂಡಿಬೆಟ್ಟದ ನಂದಿಗೆ ಇಂದು ಮಹಾಮಜ್ಜನ. 16 ನೇ ವರ್ಷದ ಮಹಾಮಸ್ತಕಭಿಷೇಕ. ಕೋವಿಡ್ ಕಾರಣದಿಂದ ಸರಳವಾಗಿ ಹಾಗೂ ಸಂಪ್ರದಾಯಿಕವಾಗಿ ನಡೆದ ಆಚರಣೆ.

ಹಾಲು,ತುಪ್ಪ, ಹರಿಶಿಣ,ಕುಂಕುಮ, ಎಳನೀರು,ಜೇನುತುಪ್ಪ ಸೇರಿದಂತೆ 38 ದ್ರವ್ಯಗಳಿಂದ ಮಜ್ಜನ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೂರನೇ ಭಾನುವಾರ ನಡೆಯುವ ಅಭಿಷೇಕ.

ಬೆಟ್ಟದ ಬಳಗದಿಂದ ನಡೆದ ಮಜ್ಜನ. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಅಭಿಷೇಕ.

ಅಭಿಷೇಕದ ನಂತರ ನಂದಿಗೆ ಅಲಂಕಾರ, ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.

key words : Mysore-chamundi-hill-nandi-mahamajjana