Monday, September 14, 2026

BDA Apartments

ಮಳೆಯಿಂದಾಗಿ ಕುಸಿದ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ರಸ್ತೆ… BDA JK_Adv BDA Adv
Home Front Page ಮಳೆಯಿಂದಾಗಿ ಕುಸಿದ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ರಸ್ತೆ…

ಮಳೆಯಿಂದಾಗಿ ಕುಸಿದ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ರಸ್ತೆ…

ಮೈಸೂರು,ಅ,22,2019(www.justkannada.in0: ಕಳೆದರೆಡು ದಿನಗಳಿಂದ ಸಾಂಸ್ಕೃತಿಕ ನಗರಿಯಲ್ಲಿ ಸುರಿಯುತ್ತಿರುವ ಮಳೆಗೆ ಚಾಮುಂಡೇಶ್ವರಿ ಬೆಟ್ಟದಲ್ಲಿನ ರಸ್ತೆ ಕುಸಿದಿದೆ.

ಚಾಮುಂಡೇಶ್ವರಿ ಬೆಟ್ದ ವ್ಯೂ ಪಾಯಿಂಟ್ ಬಳಿ ರಸ್ತೆ ಕುಸಿದಿದ್ದು  ರಸ್ತೆ ಕುಸಿದ ಪರಿಣಾಮ ಪೊಲೀಸ್ ಬ್ಯಾರಿಕೇಡ್ ಹಳ್ಳಕ್ಕೆ ಬಿದ್ದಿದೆ. ನಂದಿ ವಿಗ್ರಹದೆಡೆಗೆ ಸಾಗುವ ಮಾರ್ಗದಲ್ಲಿರೂ ವ್ಯೂ ಪಾಯಿಂಟ್ ನಲ್ಲಿ ಈ ಘಟನೆ ನಡೆದಿದೆ. ಬೆಟ್ಟದಿಂದ ಮೈಸೂರು ಅಂದವನ್ನು ಸವಿಯಲು ಮಾಡಲಾಗಿರುವ ವ್ಯೂ ಪಾಯಿಂಟ್ ಇದಾಗಿದೆ.

ಮುಂಜಾಗ್ರತಾ ಕ್ರಮವಾಗಿ ಆ ಭಾಗದಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದೀಗ ಮಳೆಯಿಂದಾಗಿ  ರಸ್ತೆ ಕುಸಿದು ಬ್ಯಾರಿಕೇಡ್ ಹಳ್ಳಕ್ಕೆ ಬಿದ್ದಿದೆ. ಇನ್ನು ಮಳೆಯಿಂದಾಗಿ ಚಾಮುಂಡೇಶ್ವರಿ ಬೆಟ್ಟದಿಂದ ಕೆಳಕ್ಕೆ ನಿರಂತರವಾಗಿ ಮಳೆ ನೀರು ಸುರಿಯುತ್ತಿದೆ.

Key words:  Mysore -Chamundeshwari hill- road-fell – rain.