ಎಲ್ಲಾ ವರ್ಗಗಳ ಅಭಿವೃದ್ಧಿಯ ಹರಿಕಾರ, ನುಡಿದಂತೆ ನಡೆದ ನಾಯಕ ಬಿಎಸ್ ಯಡಿಯೂರಪ್ಪ- ಬಿ.ವೈ ವಿಜಯೇಂದ್ರ…

ಮೈಸೂರು,ಫೆಬ್ರವರಿ,14,2021(www.justkannada.in): ತಂದೆಯವರಿಗೆ ಕೆಲವರು ಹಾವು ಚೇಳಿನಂತೆ ತೊಂದರೆ ‌ನೀಡುತ್ತಾರೆ. ಆದರೆ ಯಡಿಯೂರಪ್ಪ ನವರು ಅದೇ ಹಾವು ಚೇಳುಗಳನ್ನು ನಡುವೆ ಹೋರಾಟ ಮಾಡಿ ಬೆಳೆದವರು. ಇಂತಹ ಎಲ್ಲಾ ತೊಂದರೆಗಳನ್ನು  ಎದುರಿಸುವ ಶಕ್ತಿ ಅವರಿಗಿದೆ  ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.jk

ಮೈಸೂರಿನಲ್ಲಿ ವೀರಶೈವ ಮಹಾಸಭಾ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಯಡಿಯೂರಪ್ಪ ನವರು ನಾಲ್ಕನೇ ಬಾರಿ ಸಿಎಂ ಆಗಿದ್ದಾರೆ. ನಾನು ಎಲ್ಲೇ ಹೋದ್ರು ಜನ ಯಡಿಯೂರಪ್ಪನವರ ಮಗ ಎಂದು ಪ್ರೀತಿ ವಿಶ್ವಾಸ ತೋರುತ್ತಾರೆ. ಎಲ್ಲಾ ವರ್ಗಗಳ ಅಭಿವೃದ್ಧಿಯ ಹರಿಕಾರರು ಯಡಿಯೂರಪ್ಪನವರು. ರಾಜ್ಯದ ಜನರ ಆಶಿರ್ವಾದ ಇರುವವರೆಗೂ ಯಡಿಯೂರಪ್ಪ ಜನರ ಸೇವೆ ಮಾಡುತ್ತಾರೆ ಎಂದು ಹೇಳಿದರು.

ನುಡಿದಂತೆ ನಡೆದ ನಾಯಕ ಯಡಿಯೂರಪ್ಪ…

ಪಂಚಮಶಾಲಿ, ಕುರುಬ, ವಾಲ್ಮೀಕಿ ಹೀಗೆ ಹಲವು ಹೋರಾಟಗಳು ನಡೆಯುತ್ತಿವೆ. ನುಡಿದಂತೆ ನಡೆದ ನಾಯಕ ಯಡಿಯೂರಪ್ಪ. ಕನಕಪೀಠ, ವಾಲ್ಮೀಕಿ ಜಯಂತಿ ಘೋಷಣೆ ಮಾಡಿದ್ದಾರೆ. ಹಿಂದುಳಿದ, ದಲಿತ ವರ್ಗಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡುವ ಪ್ರಯತ್ನ ಮಾಡಿದ್ದಾರೆ.  ಕಾನೂನು ಚೌಕಟ್ಟಿನಲ್ಲಿ ಎಲ್ಲರಿಗೂ ನ್ಯಾಯ ದೊರಕಿಸಲಾಗುವುದು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೋರಾಟಗಳ ನಾಯಕತ್ವ ವಹಿಸಬೇಕು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾರ್ಗದರ್ಶನ ಮಾಡಬೇಕು ಎಂದು ವಿಜಯೇಂದ್ರ ತಿಳಿಸಿದರು.mysore- BS Yeddyurappa -development, - leader-BY Vijayendra.

ವರುಣಾ ಕ್ಷೇತ್ರದ ಜನರ ಪ್ರೀತಿಗೆ ನಾನು ಚಿರರುಣಿ….

ನನಗೆ ಅನಿರೀಕ್ಷಿತವಾಗಿ ರಾಜಕೀಯ ಜನ್ಮ ನೀಡಿದ್ದು ವರುಣಾ ಕ್ಷೇತ್ರ. ವರುಣಾ ಕ್ಷೇತ್ರದ ಜನರ ಪ್ರೀತಿಗೆ ನಾನು ಚಿರರುಣಿ. ನನ್ನ ಜೀವನದ ಉದ್ದಕ್ಕೂ ತಂದೆಯಂತೆ ಬಡವರ, ರೈತರ ಕಣ್ಣೊರೆಸುವ ಕೆಲಸ ಮಾಡುತ್ತೇನೆ‌. ತಂದೆಯವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತೇನೆ ಎಂದು ಬಿ.ವೈ.ವಿಜಯೇಂದ್ರ  ಹೇಳಿದರು.

ಕಾಲು ಜಾರಿ ಅನಾಹುತವಾದ್ರೆ ಸರಿಪಡಿಸಬಹುದು. ನಾಲಿಗೆ ಜಾರಿ ಆಗುವ ಡ್ಯಾಮೇಜ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಆಡುವ ಒಂದೊಂದು ಮಾತೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಬಿವೈ ವಿಜಯೇಂದ್ರ ಹೇಳಿದರು.

Key words: mysore- BS Yeddyurappa -development, – leader-BY Vijayendra.