ಹಕ್ಕಿಜ್ವರ ಕಂಡು ಬಂದ ಹಿನ್ನೆಲೆ: ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ‘ಹೈ ಅಲರ್ಟ್’

ಮೈಸೂರು,ಮಾ,18,2020(www.justkannada.in): ಮೈಸೂರಿನಲ್ಲಿ ಹಕ್ಕಿಜ್ವರ ಸೋಂಕು ಕಂಡು ಬಂದ ಹಿನ್ನೆಲೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯ  ಹೈ ಅಲರ್ಟ್ ಆಗಿದ್ದು ಮೃಗಾಲಯದಲ್ಲಿ ಹಕ್ಕಿಜ್ವರದ ವೈರಾಣುಗಳನ್ನು ನಿಯಂತ್ರಿಸಲು ಔಷಧಿ ಸಿಂಪಡಿಸುವ ಕಾರ್ಯ ನಡೆಸಲಾಗುತ್ತಿದೆ.

ಹಕ್ಕಿಜ್ವರ ಭೀತಿ ಹಿನ್ನೆಲೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಹಕ್ಕಿಜ್ವರದ ಸೋಂಕು ಹರಡದಂತೆ ಮೈಸೂರು ಜೂನಲ್ಲಿ ಕ್ರಮ ಕೈಗೊಳ್ಳಳಾಗಿದೆ.  ಹಕ್ಕಿಜ್ವರದ ವೈರಾಣುಗಳನ್ನು ನಿಯಂತ್ರಿಸಲು ಮೃಗಾಲಯ ಪ್ರವೇಶಿಸುವ ದ್ವಾರ ಸೇರಿದಂತೆ ಮೃಗಾಲಯದ ಎಲ್ಲಾ ದ್ವಾರಗಳಲ್ಲಿಯೂ ಔಷಧ ಸಿಂಪಡಿಸಿದ ಮ್ಯಾಟ್‌ ಅಳವಡಿಕೆ ಮಾಡಲಾಗಿದೆ.mysore-bird-flue-high-alert-chamarajendra-zoo

ಈ ಬಗ್ಗೆ ಮಾತನಾಡಿರುವ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಔಷಧಿ ಸಿಂಪಡಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಮೈಸೂರಿನಲ್ಲಿ ಹಕ್ಕಿಜ್ವರ ಧೃಡವಾಗಿದ್ದು ಮೃಗಾಲಯದಲ್ಲಿ ಸೋಂಕು ಹರಡದಂತೆ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಔಷಧೋಪಚಾರ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇನ್ನು ಹೊರಗಿನಿಂದ ಬರುವ ಸ್ಥಳೀಯ ಹಕ್ಕಿ ಪಕ್ಷಿಗಳ ಜೂ಼ಗೆ ಬರದಂತೆ ಕಡಿವಾಣ ಹಾಕಲಾಗಿದೆ. ಮೃಗಾಲಯದ ಮಾಂಸಹಾರಿ ಪ್ರಾಣಿಗಳಿಗೆ ಕೋಳಿ ನೀಡುವುದನ್ನ ನಿಲ್ಲಿಸಲಾಗಿದೆ. ಆದರೆ ಹಕ್ಕಿಜ್ವರ ಇರೋದ್ರಿಂದ, ಬದಲಿ ಆಹಾರ ನೀಡುತ್ತಿದ್ದೇವೆ. ಎಲ್ಲಾ ಪ್ರಾಣಿಪಕ್ಷಿಗಳಿಗೂ ಪೌಷ್ಟಿಕಾಹಾರ ನೀಡುವ ಮೂಲಕ ಯಾವುದೇ ಪ್ರಾಣಿ ಪಕ್ಷಿಗಳ ಆರೋಗ್ಯದಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಮೊಲ, ದನದ ಮಾಂಸ ಸೇರಿದಂತೆ ಬದಲಿ ಆಹಾರ ನೀಡಲಾಗುತ್ತಿದೆ ಎಂದು ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

ಮೃಗಾಲಯದಲ್ಲಿ ವಿದೇಶಿ ಸೇರಿದಂತೆ ಹಲವು ಬಗೆಯ ಹಕ್ಕಿ ಪಕ್ಷಿಗಳಿವೆ. ನಮ್ಮಲ್ಲಿ ಸುಸಜ್ಜಿತವಾದ ಆಸ್ಪತ್ರೆ ಇದೆ. ಉತ್ತಮ ವೈದ್ಯಾಧಿಕಾರಿಗಳು ಇದ್ದಾರೆ. ಪ್ರಾಣಿಪಕ್ಷಿಗಳ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದರೆ ತಕ್ಷಣ ಚಿಕಿತ್ಸೆ ನೀಡಲಾಗುತ್ತೆ. ಪ್ರತಿನಿತ್ಯ ತಪಾಸಣೆ ಮಾಡಲಾಗ್ತಿದೆ. ಸದ್ಯಕ್ಕೆ ಮೈಸೂರು ಮೃಗಾಲಯಕ್ಕೆ ಹಕ್ಕಿಜ್ವರದ ಭೀತಿ ಇಲ್ಲ ಎಂದು ಅಜಿತ್ ಕುಲಕರ್ಣಿ ಸ್ಪಷ್ಟಪಡಿಸಿದರು.

Key words: mysore-bird flue-High Alert – Chamarajendra Zoo